“ಎಲ್ಲರೂ ‘ನಂದನರಾಗಿ’ಇರುವಂತಾಗಲಿ”

ಮನುಷ್ಯನನ್ನು ಯಾವ ಹೆಸರಿಂದ ಕರೆದರೆ ಏನು?

ಸಂವತ್ಸರವನ್ನು ಯಾವ ಹೆಸರಿಂದ ಕರೆದರೆ ಏನು?

ಎಲ್ಲಾ ಹೆಸರುಗಳೂ ಒಂದೇ

ಗುಲಾಬಿ ಹೂವನ್ನು ಯಾವ ಹೆಸರಿನಿಂದ ಕರೆದರೂ ಅದು ಪ್ರತಿದಿನ ಸುವಾಸನೆಯನ್ನೇ ಬೀರುತ್ತದೆ ….

ಎಂದರು ವಿಲಿಯಂ ಷೇಕ್ಸ್‌ಪಿಯರ್ ಮಹಾತ್ಮರು

“What’s in a name? That which we call a rose..

By any other name would smell as sweet”

-William Shakespeare

ಬದಲಾಗಬೇಕಾಗಿರುವುದು ನಮ್ಮ ಗುಣಗಳು

ಗುಣ ಎನ್ನುವುದು ಕರ್ಮಗಳ ಮೇಲೆ ಅವಲಂಬಿಸಿರುತ್ತದೆ.

ಕರ್ಮಗಳನ್ನು ಮಾಡುತ್ತಾ ಮಾಡುತ್ತಾ ಇದ್ದರೆ… ಗುಣ ಎನ್ನುವುದು ನಿಧಾನವಾಗಿ ಬದಲಾಗುತ್ತಾ ಬದಲಾಗುತ್ತಾ ಇರುತ್ತದೆ.

ಗುಣ ಎನ್ನುವುದು ಅಂತರಾತ್ಮದ ಯಥಾರ್ಥಸ್ಥಿತಿ.

ಕರ್ಮಗಳು ಎನ್ನುವುದು ಬಾಹ್ಯಪ್ರಪಂಚದಲ್ಲಿ … ಮತ್ತು ಇತರ ಪ್ರಾಣಿಕೋಟಿಯ ಜೊತೆ ನಾವು ನಡೆಸುವ ವ್ಯವಹಾರಗಳು.

ಕರ್ಮಗಳನ್ನು ಮಾಡುತ್ತಾ ಮಾಡುತ್ತಾ ಇದ್ದರೆ … ಗುಣಗಳು ನಿಧಾನಕ್ಕೆ ಬದಲಾಗುತ್ತಿರುತ್ತವೆ.

ಜಡತ್ವ, ಸೋಮಾರಿತನ, ಅಕರ್ಮದಲ್ಲಿ ಮುಳುಗಿದ್ದರೆ ತಮೋಗುಣ

ಅಹಂಕಾರದಲ್ಲಿ … ವಿಚಕ್ಷಣಾರಹಿತ ಕರ್ಮಗಳಲ್ಲಿ ಮುಳುಗಿದ್ದರೆ ರಜೋಗುಣ

ಗೌರವ ಆದರಗಳಿಂದ, ವಿನಯದಿಂದ . . . ಪರಸ್ಪರ ಹಿತಕರ ಕರ್ಮಗಳಲ್ಲಿ, ಮುಳುಗಿದ್ದರೆ ಸತ್ವಗುಣ

ಆತ್ಮದ ಜನ್ಮ ಜನ್ಮಗಳ ಸಹಜ ವಿಕಾಸಪಥದಲ್ಲಿ

ತಮೋಗುಣ ಎನ್ನುವುದು ಮೊದಲನೇ ಹಂತ … ರಜೋಗುಣ ಎನ್ನುವುದು ಎರಡನೆಯ ಹಂತ . . ಸಾತ್ವಿಕಗುಣ ಮೂರನೆಯ ಹಂತ

ನಿರ್ಗುಣ ಎನ್ನುವುದು ಅಂತಿಮ ಸ್ಥಿತಿ.

ನೀರಿನಲ್ಲಿ ಮುಳುಗಿದರೆ ಸ್ನಾನ… ಶ್ವಾಸದಲ್ಲಿ ಮುಳುಗಿದರೆ ಧ್ಯಾನ.

ಧ್ಯಾನಾನುಭವಗಳಿಂದ ಆತ್ಮಸತ್ಯದಲ್ಲಿ ಮುಳುಗಿದರೆ ಜ್ಞಾನ

ಅದೇ ನಿರ್ಗುಣ… ಅದೇ ನಿರ್ವಾಣ.

ನಿರ್ಗುಣನಾದವನು ಲೋಕಕಲ್ಯಾಣದ ಕಾರ್ಯಕ್ರಮಗಳಲ್ಲಿ ಮುಳುಗಿರುತ್ತಾನೆ.

ಲೋಕಕಲ್ಯಾಣದಲ್ಲಿ ಮುಳುಗಿದರೆ … ಅದೇ ಪರಿನಿರ್ವಾಣ… ಅದೇ ಮಹಾಪರಿನಿರ್ವಾಣ.

ಲೋಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಮುಳುಗಿದರೆ ಮಾತ್ರವೇ ಯಾವ ಆತ್ಮಕ್ಕಾದರೂ ನಿಜವಾದ ಆನಂದ, ನಿಜವಾದ ಸಂತೋಷ.

ನಂದನ ನಾಮ ಸಂವತ್ಸರದಲ್ಲಿ ಎಲ್ಲರೂ ನಂದನದಲ್ಲಿ ಮುಳುಗುವಂತಾಗಲಿ

ನಂದನ ಅಂದರೆ ಸಂತೋಷ… ನಂದನ ಅಂದರೆ ಆನಂದ

ಎಲ್ಲರೂ ನಂದನರಾಗಿ ಇರುವಂತಾಗಲಿ.