“ಎಲ್ಲದಕ್ಕಿಂತಾ ಶ್ರೇಷ್ಠ ಯೋಗ ರಾಜಯೋಗ”

 

ಆತ್ಮವಿಕಾಸಕ್ಕಾಗಿ ಆತ್ಮದಿಂದ, ಆತ್ಮ ಸಮಕ್ಷಮದಲ್ಲಿ ನಡೆಯುವ ಪ್ರಕ್ರಿಯವನ್ನೇ ‘ಧ್ಯಾನ’ ಎನ್ನುತ್ತಾರೆ; ಬುದ್ಧನು ಜ್ಞಾನಬೋಧನೆ ಮಾಡಿದ ‘ಆನಾಪಾನಾಸತಿ’ ಧ್ಯಾನ ಉತ್ತಮವಾದದ್ದು: ಮನುಷ್ಯನಿಗೆ ವಾಕ್‌ಶುದ್ಧಿ ಪ್ರಧಾನ. ಧ್ಯಾನದಿಂದ ಮಾನವನು ಉತ್ತಮನಾಗುತ್ತಾನೆ.

ಯೋಗ ಎಂದರೆ ಮಿಲನ … ಮನಸ್ಸು-ಶರೀರದ ಜೊತೆ ಬೆರೆತರೆ ‘ಕರ್ಮಯೋಗ’; ಮನಸ್ಸು-ಬುದ್ಧಿಯ ಜೊತೆ ಬೆರೆತರೆ ‘ಜ್ಞಾನಯೋಗ’; ಬುದ್ಧಿ-ಆತ್ಮದ ಜೊತೆ ಬೆರೆತರೆ ’ರಾಜಯೋಗ’.

ನಾನಾರೀತಿಯಲ್ಲಿ ಪರಿಭ್ರಮಿಸುವ ಮನಸ್ಸನ್ನು ಅಧೀನಕ್ಕೆ ತರಬೇಕು; ಅದು ಧ್ಯಾನದಿಂದಲೇ ಸಾಧ್ಯ; ಕೇವಲ ವಾಕ್ಕುಗಳಿಂದ ಮಾತ್ರ ಯಾರೂ ಜ್ಞಾನಿಗಳಾಗಲಾರರು; ಸ್ವಯಂ ಸಾಧನೆಯಿಂದಲೇ ಜ್ಞಾನಸಿದ್ಧಿಸುತ್ತದೆ: ಅವರವರ ಜೀವನಕ್ಕೆ ಅವರೇ ನಿರ್ದೇಶಕರು; ಧ್ಯಾನ ಸಾಧನೆಯಿಂದಲೇ ಶಾಶ್ವತ ಆನಂದ ಹೊಂದಬಹುದು; ಕಾರಣವಿಲ್ಲದೇ ಯಾವ ಕಾರ್ಯವೂ ಇರುವುದಿಲ್ಲ; ಅದೇ ಪರಮ ವಿಜ್ಞಾನಸಾರ.

ಎಲ್ಲಾ ಯೋಗಗಳಲ್ಲೂ ‘ರಾಜಯೋಗ’ ಶ್ರೇಷ್ಠವಾದದ್ದು, ಅದೇ ‘ಶ್ವಾಸದ ಮೇಲೆ ಗಮನ’. ಮರಣಕ್ಕೆ ಹೆದರದೆ ಇರುವವರೇ ಆತ್ಮಜ್ಞಾನಿಗಳು.

ಜ್ಞಾನ ಪರಿಪೂರ್ಣವಾಗಿದ್ದರೇ ಕರ್ಮ ಪರಿಪೂರ್ಣವಾಗಿರುತ್ತದೆ; ಶುಭ’; ಅಶುಭ’ ಎನ್ನುವುದು ಹೋದರೇನೆ ಜ್ಞಾನ ಉಗಮವಾಗುತ್ತದೆ; ಅವರಿಗವರೇ ಪರತಂತ್ರವನ್ನು ಬಿಟ್ಟು ಸ್ವತಂತ್ರವಾಗಿ ಬೆಳೆಯಬೇಕು, ಜೀವಿಸಬೇಕು.

ಗುರುವು ಕೇವಲ ಮಾರ್ಗನಿರ್ದೇಶಕನು ಮಾತ್ರವೆ! ಗುರುವು ಕೇವಲ ಸೂಚನೆಗಳು ಮಾತ್ರ ನೀಡಬಲ್ಲ! ಕಾರ್ಯಕಾರಣ ಧರ್ಮಗಳನ್ನು ವಿವರಿಸುವುದು ಮಾತ್ರ ಗುರುಗಳ ಕೆಲಸ.

ಯಾವ ರಂಗದಲ್ಲಾದರೂ ಮುಂದಾಗಿರಬೇಕಾದರೇ ಧ್ಯಾನ ಸಾಧನೆ ಚೆನ್ನಾಗಿ ಉಪಯೋಗವಾಗುತ್ತದೆ; ಧ್ಯಾನ ಪ್ರತಿಯೊಬ್ಬರ ಜೀವನದಲ್ಲಿ ನಿತ್ಯಕ್ರಿಯೆ ಆಗಬೇಕು.

ಕೃಷ್ಣನೆಂದರೆ ನಿತ್ಯನೂತನವಾಗಿರುವವನು; ಎಲ್ಲರೂ ಕೃಷ್ಣನಹಾಗೆ ಇರಬೇಕು.

ಯೋಗ ಅಂದರೆ ನಿತ್ಯವೂ ಕರ್ಮ ಮಾಡುವುದು; ಅಕರ್ಮರಾಗಿ ಯಾವತ್ತಿಗೂ ಇರಬಾರದು; ಕರ್ಮ ಫಲಿತಗಳನ್ನು ಆಶಿಸಿದರೆ ಅನಿವಾರ್ಯವಾಗಿ ದುಃಖ ಸಂಭವಿಸುತ್ತದೆ.