ಎನ್‌ಲೈಟೆನ್‌ಮೆಂಟ್ ಎಂದರೆ ?

 

  • ತನ್ನದೇವಾಸ್ತವಗಳ, ಸಹಜ ಮನಃಪ್ರವೃತ್ತಿಗಳ ಸಂಭವಗಳ ಸರ್ವಸ್ವವನ್ನೂ ಅನಂತವಾಗಿ, ತೀಕ್ಷ್ಣವಾಗಿ ಅನ್ವೇಷಿಸಿ ಸತ್ಯವನ್ನು ಗ್ರಹಿಸುವ ತತ್ವವೇ ಎನ್‌ಲೈಟೆನ್‌ಮೆಂಟ್ ಅಂದರೆ.
  • ಆತ್ಮಾತಿಶಯವನ್ನು ಸಂಪೂರ್ಣವಾಗಿ ತ್ಯಜಿಸಿ ಮಹಾಶೂನ್ಯತಾ ಸ್ಥಿತಿಯನ್ನು ಸಂಪ್ರಾಪ್ತಿಸಿಕೊಳ್ಳುವುದೇ ಎನ್‌ಲೈಟೆನ್‌ಮೆಂಟ್ ಅಂದರೆ.
  • ಯಾವುದಾದರೂ ಮಹದಾಶಯವನ್ನು ಅರಿವಿಗೆ ತಂದುಕೊಂಡು, ಆ ಮಹಾಕಾರ್ಯವನ್ನು ಪ್ರಯತ್ನದಿಂದ ನೆರವೇರಿಸಲಾಗುವುದೇ ಎನ್‌ಲೈಟೆನ್‌ಮೆಂಟ್ ಅಂದರೆ.
  • ನಿರಾಸೆಯಿಂದ ಎಂದಿಗೂ ಕುಗ್ಗದೇ, ಕಾಲಹರಣವನ್ನು ಎಂದಿಗೂ ಮಾಡದಿರುವುದೇ ಎನ್‌ಲೈಟೆನ್‌ಮೆಂಟ್ ಅಂದರೆ.
  • ಗತವನ್ನು ಕುರಿತು ಸದಾ ನೆನೆಸಿಕೊಳ್ಳದೇ, ಭವಿಷ್ಯತ್ತು ಕುರಿತು ಸ್ವಲ್ಪವೂ ಆಶಿಸದೇ … ನಿರಂತರ ವರ್ತಮಾನದಲ್ಲಿ ಪೂರ್ಣವಾಗಿ ಜೀವಿಸುತ್ತಾ ಇರಲಾಗುವುದೇ ಎನ್‌ಲೈಟೆನ್‌ಮೆಂಟ್ ಅಂದರೆ.
  • ಸರ್ವಸ್ಥಿತಿಗತಿಗಳಿಗೆ ಕಾರಣ ’ವಿಧಿ’ ಅಲ್ಲವೇ ಅಲ್ಲ ; ನಮ್ಮ ಜೀವನದಲ್ಲಿ ನಡೆದ ಎಲ್ಲಾ ಸಂಭವಗಳಿಗೆ ಕೇವಲ ನಮ್ಮ ’ಆಯ್ಕೆ’ ಮಾತ್ರವೇ ಕಾರಣ ಎನ್ನುವ ಅವಗಾಹನೆ ಹೊಂದಿರುವುದೇ ಎನ್‌ಲೈಟೆನ್‌ಮೆಂಟ್ ಅಂದರೆ.
  • ಗ್ರಹಿಸಬೇಕಾದ, ಅಧ್ಯಯನ ಮಾಡಬೇಕಾದ ಏಕೈಕ ಶಾಸ್ತ್ರ ’ ಆತ್ಮಶಾಸ್ತ್ರ ’ ಮಾತ್ರವೇ ಎನ್ನುವ ಅವಗಾಹನೆ ಇರುವುದೇ ಎನ್‌ಲೈಟೆನ್‌ಮೆಂಟ್.
  • ನಾವು ’ಸರ್ವಜ್ಞರು’ ಎಂದಿಗೂ ಆಗಲಾರೆವು ಎನ್ನುವ ಪ್ರಜ್ಞಾಸ್ಥಿತಿಯನ್ನು ಹೊಂದಿರುವುದೇ ಎನ್‌ಲೈಟೆನ್‌ಮೆಂಟ್ ಅಂದರೆ.
  • ಅಸ್ತಿತ್ವದಲ್ಲಿರುವ ಎಲ್ಲವೂ ನಾವೇ ಎನ್ನುವ ಅರಿವೇ ಎನ್‌ಲೈಟೆನ್‌ಮೆಂಟ್ ಅಂದರೆ.
  • ಸರ್ವಸ್ವದಿಂದ ಸಖ್ಯವೇ, ಜೀವ ಸರ್ವಸ್ವದ ಮೇಲಿರುವ ಸಂಪೂರ್ಣ ಅನುರಾಗವೇ ಎನ್‌ಲೈಟೆನ್‌ಮೆಂಟ್. ವಿಸ್ತಾರವಾಗಿರುವ ಜೀವಕಾರುಣ್ಯವೇ, ಸರ್ವಸ್ವದಿಂದ ಮೂರ್ತೀಭವಿಸಿದ ಮಿತ್ರತ್ವವೇ ಎನ್‌ಲೈಟೆನ್‌ಮೆಂಟ್ !
  • ಯಾರನ್ನೂ ನಿಂದನೆ ಮಾಡದೇ ಇರುವ ತತ್ವವೇ … ಎನ್‌ಲೈಟೆನ್‌ಮೆಂಟ್.
  • ಎಲ್ಲರ ಮಹತ್ವದಿಂದಲೂ … ಮತ್ತು ಎಲ್ಲರ ಅಲ್ಪತ್ವದಿಂದಲೂ ಸಹ ಜ್ಞಾನವನ್ನು ಗ್ರಹಿಸಬಲ್ಲ ತತ್ವವೇ … ಎನ್‌ಲೈಟೆನ್‌ಮೆಂಟ್. ಎಲ್ಲರ ವಿವೇಕದಿಂದಲೂ, ಮತ್ತು ಎಲ್ಲರ ಮೂರ್ಖತ್ವದಿಂದಲೂ ಸಹ ಕಲಿತುಕೊಳ್ಳುವ ಗುಣವೇ ಎನ್‌ಲೈಟೆನ್‌ಮೆಂಟ್.
  • ಗುರುಸನ್ನಿಧಿಯಲ್ಲಿ ಮನಸ್ಸು ಮೌನವಾಗಿ ತಕ್ಷಣ ಸ್ಥಿತಪ್ರಜ್ಞ ಆಗಬಲ್ಲ ಸ್ಥಿತಿಯೇ ಎನ್‌ಲೈಟೆನ್‌ಮೆಂಟ್.
  • ಮಾನವ ಸಹಜ ದಿವ್ಯತ್ವವನ್ನು, ನಿಜಾಯಿತಿಯನ್ನು ಎಂದಿಗೂ ಅವಿಶ್ವಾಸದಿಂದ ದರ್ಶಿಸದ ತತ್ವವೇ … ಎನ್‌ಲೈಟೆನ್‌ಮೆಂಟ್.
  • ಬಾಹ್ಯಪ್ರಪಂಚ ಪ್ರಚಂಡ ಘೋಷಣೆಗಳಲ್ಲಿ ಇದ್ದರೂ ಸಹ ಅಂತರಂಗದಲ್ಲಿ ನಿಶ್ಶಬ್ದವನ್ನು ಸದಾ ಎಲ್ಲಾ ವೇಳೆಯಲ್ಲೂ ನಿಲ್ಲಿಸುತ್ತಾ ಇರಲಾಗುವ ಮಹಾತತ್ವವೇ … ಎನ್‌ಲೈಟೆನ್‌ಮೆಂಟ್.
  • ಸಹಜ ಪ್ರವೃತ್ತಿಯಲ್ಲಿ ಸ್ವಯಂ ಆಗಿ ಜೀವನದಲ್ಲಿ ಜೀವಿಸುತ್ತಾ ಸರ್ವರನ್ನೂ ಅವರವರ ಸಹಜ ಸ್ಥಿತಿಗತಿಗಳಲ್ಲಿ ಮುಂದುವರೆಯಲು ಬಿಡುವ ಸಂಯಮದ ಸೌಮ್ಯವೇ … ಎನ್‌ಲೈಟೆನ್‌ಮೆಂಟ್.
  • ಅನಂತಶಕ್ತಿಯುಕ್ತಿಗಳು, ಸರ್ವಕಾರ್ಯದಕ್ಷತೆಗಳು ಸಹಜಸ್ಥಿತಿಯಲ್ಲಿ ಸ್ವಯಂ ಆಗಿ ನಮ್ಮ ಅಂತರಂಗದಲ್ಲಿಯೇ ಇವೆ ಎನ್ನುವ ಅವಗಾಹನೆಯೇ ಎನ್‌ಲೈಟೆನ್‌ಮೆಂಟ್.
  • ನಮ್ಮ ವಾಸ್ತವಗಳನ್ನು ಸದಾ ನಾವೇ ಸೃಷ್ಟಿಸಿಕೊಳ್ಳುತ್ತೇವೆ ಎನ್ನುವ ಅವಗಾಹನೆಯೇ ಎನ್‌ಲೈಟೆನ್‌ಮೆಂಟ್.
  • ಬಾಹ್ಯ ಸಂಘವ್ಯವಸ್ಥೆಯನ್ನು ಆಂತರ್ಯದಲ್ಲಿ ’ ಅಂತ್ಯ ’ ಮಾಡಿಕೊಳ್ಳುವ ತತ್ವವೇ ಎನ್‌ಲೈಟೆನ್‌ಮೆಂಟ್. ಸಮಾಜದಲ್ಲೇ ನಮ್ಮ ಜೀವನ ಸಾಗುತ್ತಿದ್ದರೂ ನಮ್ಮ ಮನಸ್ಸಿನಲ್ಲಿ ’ಸಂಘ’ ಜೀವಿಸದ ಸ್ಥಿತಿಯೇ ಎನ್‌ಲೈಟೆನ್‌ಮೆಂಟ್.
  • ‘ಸ್ವಯಂ’ನಲ್ಲಿ ಸ್ಥಿತವಾಗಿರುವ ಸ್ಥಿತಿಯೇ ಎನ್‌ಲೈಟೆನ್‌ಮೆಂಟ್. ಸ್ವಂತ ಅಭಿವೃದ್ಧಿಗಾಗಿಯೇ ನಮ್ಮ ಜೀವನ ಸಾಗುತ್ತಿದೆ; ಸ್ವಂತ ಅಭಿವೃದ್ಧಿಗಾಗಿಯೇ ನಮ್ಮ ಬೆಳವಣಿಗೆ ಸಂಭವಿಸುತ್ತಿದೆ ಎಂದು ಗ್ರಹಿಸುವುದೇ … ಎನ್‌ಲೈಟೆನ್‌ಮೆಂಟ್.
  • ಯಾವುದಕ್ಕೂ ಭಯಪಡದೆ ಒಂದು ನಿರ್ಭಯ ಸ್ಥಿತಿಯೇ, ಒಂದು ತರಹದ ನಿರ್ಭೀತಿಯ ಸ್ಥಿತಿಯೇ, ಒಂದು ಸಾಹಸೋಪೇತ ಪ್ರವೃತ್ತಿಯೇ… ಎನ್‌ಲೈಟೆನ್‌ಮೆಂಟ್.
  • ಭಾವಾವೇಶಗಳಲ್ಲಿ, ಅನುಭೂತಿಗಳಲ್ಲಿ … ಸದಾ ಚಿಕ್ಕ ಮಗುವಿನ ಹಾಗೆ ಸಹಜ ಅಮಾಯಕತ್ವದಿಂದ, ನೇರವಾಗಿ ಜೀವಿಸಬಲ್ಲ ತತ್ವವೇ – ಎನ್‌ಲೈಟೆನ್‌ಮೆಂಟ್.
  • ‘ಕ್ರಮ ತಪ್ಪದ ಗಾಣದೆತ್ತಿನ (doing the same routine) ಪ್ರವೃತ್ತಿ’ಯಲ್ಲಿ ಸ್ವಲ್ಪವೂ ಸಿಕ್ಕಿಹಾಕಿಕೊಳ್ಳದೇ ನಿತ್ಯ ಸೃಜನಾತ್ಮಕವಾಗಿ ವರ್ತಿಸಬಲ್ಲ ತತ್ವವೇ … ಎನ್‌ಲೈಟೆನ್‌ಮೆಂಟ್.
  • ಅನಂತವಾದ ಬಾಧೆಗಳನ್ನು, ವಿಶೇಷವಾದ ಅವಮಾನವನ್ನು, ಅನಾಯಾಸವಾಗಿ ಕಿರುನಗೆಯಿಂದ ಸಹಿಸಬಲ್ಲ ಸಾಮರ್ಥ್ಯವೇ … ಎನ್‌ಲೈಟೆನ್‌ಮೆಂಟ್.
  • ಸ್ವಂತ ಆತ್ಮವಿಶ್ವಾಸವನ್ನು, ಸ್ವಂತ ಪ್ರತ್ಯೇಕ ವ್ಯಕ್ತಿತ್ವವನ್ನು ಸ್ವಲ್ಪವೂ ಕಳೆದುಕೊಳ್ಳದೇ ಎಲ್ಲರ ಸ್ವಭಾವಗಳಿಂದ ಹೊಂದಾಣಿಕೆಯಿಂದ ಸಹಜೀವನ ಮಾಡಬಲ್ಲ ಸಹಜ ಸಾಮರ್ಥ್ಯವೇ … ಎನ್‌ಲೈಟೆನ್‌ಮೆಂಟ್.
  • ಸ್ವಂತ ಅನುಭಾವಗಳನ್ನು, ಸ್ವಂತ ಭಾವಾವೇಶಗಳನ್ನು ಎಷ್ಟು ಮಾತ್ರವೂ ಅಣಚಿಹಾಕಿಕೊಳ್ಳದ (ನಿಯಂತ್ರಿಸಿಕೊಳ್ಳದ) ಆತ್ಮಪ್ರವೃತ್ತಿಯೇ … ಎನ್‌ಲೈಟೆನ್‌ಮೆಂಟ್.
  • ‘ಮೃತ್ಯುವು’ ಅನಿವಾರ್ಯ ಎನ್ನುವ ಮಾತು ಒಂದು ಮೂರ್ಖ ಬಡಬಡಿಕೆ, ಬಯಸಿದರೆ ಸಾಯಬೇಕಾದ ಅವಶ್ಯಕತೆ ಇಲ್ಲ ಎಂದು ಗ್ರಹಿಸಲಾಗುವುದೇ ಎನ್‌ಲೈಟೆನ್‌ಮೆಂಟ್ ಅಂದರೆ.
  • ಸದಾ ತಲೆ ಎತ್ತಿಕೊಂಡು ಸ್ಥಿರವಾಗಿ ನಿಲ್ಲಬಹುದು ಮತ್ತು ’ ದೋಷಿತ್ವ ಭಾವನೆ ’ಯಿಂದ ಯಾರ ಎದುರಿಗೂ ತಲೆ ತಗ್ಗಿಸಬೇಕಾಗಿಲ್ಲ ಎನ್ನುವ ಆತ್ಮನ್ಯೂನ್ಯತಾ ಭಾವರಾಹಿತ್ಯವೇ ಎನ್‌ಲೈಟೆನ್‌ಮೆಂಟ್.
  • ಒಂದು ನಿರ್ದಿಷ್ಟ ಸಮಯಾಂತರದಲ್ಲಿ, ಒಂದು ನಿರ್ದಿಷ್ಟ ಸತ್ಯತಲದಲ್ಲಿ ’ – ಒಂದಿಷ್ಟು ಭಾಗವನ್ನು ಮಾತ್ರವೇ, ಒಂದು ನಿರ್ದಿಷ್ಟ ಪರಿಧಿಯನ್ನು ಮಾತ್ರವೇ ನಾವು ದರ್ಶಿಸಬಲ್ಲೆವು ಎಂದು ಗ್ರಹಿಸುವುದೇ ಎನ್‌ಲೈಟೆನ್‌ಮೆಂಟ್.
  • ಸಂಪ್ರಜ್ಞತೆಯನ್ನು ಇತರರು ಯಾರೂ ನಮಗೆ ಅನುಗ್ರಹಿಸಲಾರರೆಂದೂ, ಮತ್ತು ಅದನ್ನು ನಾವು ಯಾರಿಗೂ ಅನುಗ್ರಹಿಸಲಾರೆವು ಎಂದು ಗ್ರಹಿಸಲಾಗುವುದೇ ಎನ್‌ಲೈಟೆನ್‌ಮೆಂಟ್.
  • ಒಳ್ಳೆಯದು, ಕೆಟ್ಟದ್ದು ಎನ್ನುವ ಎರಡು ಇವೆ ಎಂದು, ಮತ್ತು ಒಳ್ಳೆಯದು, ಕೆಟ್ಟದ್ದು ಎನ್ನುವ ಎರಡು ಇಲ್ಲವೇ ಇಲ್ಲ ಎಂದು… ಎರಡನ್ನೂ ಏಕಕಾಲದಲ್ಲಿ ಗ್ರಹಿಸಲಾಗುವುದೇ – ಎನ್‌ಲೈಟೆನ್‌ಮೆಂಟ್. ದ್ವಂದ್ವಗಳ ವಿರುದ್ಧಗಳಿಂದ ದರ್ಶನ ನೀಡುವ ವಾಸ್ತವಗಳ, ಸತ್ಯಗಳ ನಿತ್ಯಾರ್ಥವನ್ನು ಗ್ರಹಿಸುವ ತತ್ವವೇ – ಎನ್‌ಲೈಟೆನ್‌ಮೆಂಟ್.
  • ಸಂಸಾರವೇ ನಿರ್ವಾಣ ಎನ್ನುವ ಸತ್ಯವನ್ನು ಗ್ರಹಿಸುವುದೇ – ಎನ್‌ಲೈಟೆನ್‌ಮೆಂಟ್.
  • ಒಬ್ಬ ಗುರುವು ಸಾಕು … ಮುಕ್ತಿ ಪ್ರಾಪ್ತಿಯಾಗಲು ಎನ್ನುವ ಧೋರಣೆಯನ್ನು ಬದಲಾಯಿಸಿಕೊಂಡು, ಎಲ್ಲರಿಂದಲೂ ಎಲ್ಲಾ ಕಲಿತುಕೊಳ್ಳಬೇಕು ಎನ್ನುವ ಮನೋಭಾವವನ್ನು ಹೊಂದಿರುವುದೇ ಎನ್‌ಲೈಟೆನ್‌ಮೆಂಟ್.
  • ’ ಕಾಲ ’ ಎನ್ನುವುದು ’ ಒಂದು ಮಹಾಭ್ರಮೆ ’ ಹೊರತು ಮತ್ತೊಂದಲ್ಲ ಎನ್ನುವ ಪ್ರಜ್ಞೆಂi – ಎನ್‌ಲೈಟೆನ್‌ಮೆಂಟ್.
  • ಇತರರ ತಪ್ಪು ಒಪ್ಪುಗಳನ್ನು ಎಣಿಸಿ, ಯಾವ ತೀರ್ಪುಗಳನ್ನೂ ನಿರ್ಣಯಿಸದ ಸಹಜ ನಿರ್ಮಲ ಸ್ವಭಾವವೇ ಎನ್‌ಲೈಟೆನ್‌ಮೆಂಟ್.
  • ಜೀವನದ ಅವಕಾಶದ ಅವಲಂಬನೆಯಲ್ಲಿ ವ್ಯವಹಾರವನ್ನು ನಿಖರವಾಗಿ ಶಾಸಿಸುವ ಪ್ರತ್ಯೇಕ ನ್ಯಾಯಗಳೂ, ಪ್ರತ್ಯೇಕ ಧರ್ಮಗಳೂ, ಪ್ರತ್ಯೇಕ ನಿಷಿದ್ಧತೆಗಳೆನ್ನುವುದು ಮೌಲಿಕವಾಗಿ ಏನೂ ಇಲ್ಲವೆಂಬ ಅರಿವೇ – ಎನ್‌ಲೈಟೆನ್‌ಮೆಂಟ್.
  • ಪ್ರಜ್ಞಾ ಸರ್ವಸ್ವಕ್ಕೆ ಪ್ರಧಾನ ಸಾಧನಾಂಶ ಧ್ಯಾನವೇ ವಿನಹ ಮತ್ತೊಂದಲ್ಲ ಎನ್ನುವ ಮೌಲಿಕವಾದ ಅರಿವೇ – ಎನ್‌ಲೈಟೆನ್‌ಮೆಂಟ್.
  • ಪ್ರತಿಯೊಂದು ವಾಕ್ಕಿನ ಮುಂದು, ಪ್ರತಿಯೊಂದು ವಾಕ್ಕಿನ ನಂತರ ಸಹ ತದೇಕ ದೀಕ್ಷೆಯಿಂದ ಸಾಗುವ ಆತ್ಮ ವಿವೇಚನೆಯೇ ಎನ್‌ಲೈಟೆನ್‌ಮೆಂಟ್.
  • ಅನ್ಯರ ಅಭೀಷ್ಠೆಗಳಿಗೆ, ಅನ್ಯರ ಆದೇಶಗಳಿಗೆ, ಅನ್ಯರ ಆಲೋಚನೆಗಳಿಗೆ ಅನುಗುಣವಾಗಿ ಅಲ್ಲದೇ, ’ಸ್ವಂತ ಸಹಜ ಅವಬೋಧನೆಯನ್ನು’ ಮಾತ್ರವೇ ಅನುಸರಿಸಿ ಕಾಯ್ರೋನ್ಮುಖರಾಗುವುದೇ – ಎನ್‌ಲೈಟೆನ್‌ಮೆಂಟ್.
  • ಸಾಂದ್ರೀಕೃತವಾಗಿ ಘನೀಭವಿಸಿದ ಪ್ರಾಣಶಕ್ತಿಯೇ ’ ಪದಾರ್ಥ ’ ಎನ್ನುವ ಅರಿವೇ – ಎನ್‌ಲೈಟೆನ್‌ಮೆಂಟ್. ಆಲೋಚನೆಯ ಫಲಿತವೇ ’ ಪ್ರಾಣಶಕ್ತಿ ’, ಆತ್ಮಚೈತನ್ಯದ ವ್ಯವಹಾರವೇ ’ಆಲೋಚನೆ’, ಆತ್ಮಚೈತನ್ಯವೇ ಸರ್ವಸ್ವಮೂಲ… ಎಂದು ಅನುಭವಾತ್ಮಕವಾಗಿ ತಿಳಿದುಕೊಳ್ಳುವುದೇ ಎನ್‌ಲೈಟೆನ್‌ಮೆಂಟ್.