“ಉಪವಾಸಜಾಗರಣೆ”

ಶಿವರಾತ್ರಿಯಲ್ಲಿ ಎರಡು ಮುಖ್ಯವಾದ ಅಂಗಗಳಿವೆ

ಒಂದು … ಉಪವಾಸ

ಎರಡು … ಜಾಗರಣೆ

ಉಪವಾಸ ಅಂದರೆ . . ಮಾನಸಿಕಪರವಾದ ಲಂಖಣ

ಉಪವಾಸ ಅಂದರೆ . . ಧ್ಯಾನದಲ್ಲಿ ಮನಸ್ಸನ್ನು ಶೂನ್ಯಗೊಳಿಸುವುದು

ಉಪವಾಸ ಅಂದರೆ . . ಹೊಟ್ಟೆಗೆ ಏನೂ ಹಾಕದೇ ಇರುವುದಲ್ಲ

ಜಾಗರಣೆ ಅಂದರೆ . . ದಿವ್ಯಚಕ್ಷುವಿನ ಜಾಗರಣೆ

ಜಾಗರಣೆ ಅಂದರೆ . . ಆತ್ಮದ ಜಾಗರಣೆ

ಜಾಗರಣೆ ಅಂದರೆ . . ರಾತ್ರಿ ಎಲ್ಲಾ ಎಚ್ಚರಿಕೆಯಿಂದ ಇದ್ದು ಶಿವನ ಸಿನಿಮಾಗಳನ್ನು ನೋಡುವುದಲ್ಲ

ಬೆಳಗಿನಿಂದ ಉಪವಾಸ ಇದ್ದರೇನೆ . . ರಾತ್ರಿ ಜಾಗರಣೆ ಆಗುವುದು

ಬೆಳಗಿನಿಂದ ಧ್ಯಾನಾಭ್ಯಾಸದಲ್ಲಿ . . ಅಂದರೆ, ಶ್ವಾಸಾನುಸಂಧಾನದಲ್ಲಿ ಇದ್ದರೇನೆ

ರಾತ್ರಿ ದಿವ್ಯಚಕ್ಷುವಿನ ಉದ್ದೀಪನವಾಗುವುದು

ಉಪವಾಸ ಇಲ್ಲದೇ ಜಾಗರಣೆ ಎನ್ನುವುದು ಅಸಂಭವ

ಉಪವಾಸದ ಉದ್ದೇಶವೇ . . ಜಾಗರಣೆ

ಜಾಗರಣೆಗೆ ಮುನ್ನ ಉಪವಾಸ ಇರಬೇಕಾದುದು ಅತ್ಯಗತ್ಯ

ಇದು ನಿಜವಾದ ಕಥೆ.

ಹೊಟ್ಟೆಗೆ ಏನೂ ಹಾಕದೆ ಇರುವುದರಿಂದ ಮನೋನಾಶನ ಆಗಲಾರದು

ರಾತ್ರಿ ಎಲ್ಲಾ ಶಿವನ ಸಿನಿಮಾಗಳನ್ನು ನೋಡುವುದರಿಂದ, ಆತ್ಮೋದ್ದೀಪನ ಆಗಲಾರದು

ಒಂದು ಹಗಲಾದರೂ ನಿಜವಾದ ಉಪವಾಸದಲ್ಲಿದ್ದು

ಒಂದು ರಾತ್ರಿಯೆಲ್ಲಾ ಆದರೂ ನಿಜವಾದ ಜಾಗರಣೆ ಯಲ್ಲಿದ್ದರೆ

ಆ ಒಂದು ದಿನ ಸಾಕು . .

ಆ ದಿನ ಮಹಾಶಿವರಾತ್ರಿ ಆಗುತ್ತದೆ

. . ಜನ್ಮಕ್ಕೆ ಒಂದು ಶಿವರಾತ್ರಿ ಎನ್ನುತ್ತಾರೆ . .

ಒಂದು ರಾತ್ರಿ ನಿಜವಾದ ಶಿವರಾತ್ರಿ ಆದರೆ … ಇನ್ನು ಜನ್ಮವೆಲ್ಲಾ ನಿಜವಾದ ಜಾಗರಣವೇ

ಒಂದು ಹಗಲು ನಿಜವಾದ ಉಪವಾಸದಲ್ಲಿ ಇರಲಾದರೆ, ಇನ್ನು ಜನ್ಮವೆಲ್ಲಾ ನಿಜವಾದ ಉಪವಾಸವೇ

ಏಸು ಪ್ರಭುಗಳು . . ” I Fasted for forty days” ಎಂದರು

ಅದು ಶಾರೀರಕ ಉಪವಾಸವಲ್ಲ . . ಮಾನಸಿಕ ಉಪವಾಸ

“I and my Father are one”

“In my Father’s kingdom there are many mansions”

“Seek ye the Kingdom of God… and his Righteousness First

and then all else will br added unto you”

ಎಂದಾಗ … ಅದೆಲ್ಲಾ ನಿಜವಾದ ಜಾಗರಣೆಯೇ

… ಅದೇ ರೀತಿಯಲ್ಲಿ …

“ಓ ಅರ್ಜುನಾ ನೀನು ನಾನು ಅನೇಕ ಜನ್ಮಗಳನ್ನು ಎತ್ತಿದ್ದೇವೆ

ಅವೆಲ್ಲಾ ನನಗೆ ಗೊತ್ತು …”

“ಓ ಕುಂತೀ ಪುತ್ರನೇ ನೀನು ಬ್ರಹ್ಮಲೋಕಕ್ಕೆ ಹೋದರೂ ಪುನಃ ಮರಳಿ ಬರಬೇಕಾದ್ದೇ

ಆದರೆ, ನಾನಿರುವ ಸ್ಥಿತಿಗೆ ನೀನೂ ಸಹ ತಲುಪಿದರೆ, ಇನ್ನು ನೀನು ಪುನಃ ಮರಳಿ ಬರುವುದಿಲ್ಲ …”

ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಎಂದಾಗ … ಅದೆಲ್ಲಾ ನಿಜವಾದ ಜಾಗರಣೆಯೇ

ಉಪವಾಸ ಎನ್ನುವುದು ಧ್ಯಾನಕರ್ಮವಾದರೆ

ಜಾಗರಣೆ ಎನ್ನುವುದು … ಧ್ಯಾನಮಹಾಕರ್ಮದ ಮಹಾಫಲ

ಉಪವಾಸ ಜಿಂದಾಬಾದ್… ಅಂದರೆ… ಧ್ಯಾನಂ ಜಿಂದಾಬಾದ್

ಜಾಗರಣೆ ಜಿಂದಾಬಾದ್… ಅಂದರೆ… ಆತ್ಮಾನುಭವಗಳು ಜಿಂದಾಬಾದ್

ಜಾಗರಣೆ ಜಿಂದಾಬಾದ್… ಅಂದರೆ… ಶಿವನ ಮೂರನೆಯ ಕಣ್ಣು ಜಿಂದಾಬಾದ್