“ಉತ್ತಮ ಗುರುಗಳು”

ಬಗೆಬಗೆಯ ಗುರುಗಳ

ಕುರಿತು ವೇಮನ ಹೀಗೆ ಹೇಳಿದ್ದಾನೆ:

“ಕಲ್ಲ ಗುರುಡು ಗಟ್ಟು ಕರ್ಮಚಯಂಬುಲು –

ಮಧ್ಯ ಗುರುಡು ಗಟ್ಟು ಮಂತ್ರಚಯಮು;

ಉತ್ತಮುಂಡು ಗಟ್ಟು ಯೋಗ ಸಾಮ್ರಾಜ್ಯಂಬು –

ವಿಶ್ವದಾಭಿರಾಮ ವಿನುರ ವೇಮ!” (ತೆಲುಗು ವೇಮನ ಪದ್ಯ)

ಅಂದರೆ,

ಮೂರ್ಖ ಗುರುಗಳು ಪ್ರಜೆಗಳಿಗೆ “ಕರ್ಮ” ಗಳನ್ನು ಮಾಡುವುದನ್ನೇ ಪ್ರೋತ್ಸಾಹಿಸುತ್ತಾರೆ;

ಕರ್ಮಗಳು ಅಂದರೆ “ಬಾಹ್ಯಪೂಜೆಗಳು” ಎಂದರ್ಥ.

ಮಧ್ಯಮ ಗುರುಗಳು “ಮಂತ್ರಉಪಾಸನೆ” ಗಳಿಗೆ ಶಿಷ್ಯರಿಗೆ

ಹುರಿದುಂಬಿಸುತ್ತಾರೆ; ಅದೇ ಪರಮಯೋಗ ಎನ್ನುತ್ತಾ ಪ್ರವಚನೆ ನೀಡುತ್ತಿರುತ್ತಾರೆ.

ಆದರೆ,

ಉತ್ತಮ ಗುರುಗಳು “ಧ್ಯಾನಯೋಗ“ವನ್ನು ಮಾತ್ರವೇ

ಎಲ್ಲರಿಗೂ, ಎಲ್ಲಾ ವೇಳೆಯಲ್ಲೂ ಬೋಧಿಸುತ್ತಾ ಇರುತ್ತಾರೆ.

ಬಾಹ್ಯಪೂಜೆಗಳು ಮಾಡುವುದು ಮೂರ್ಖತನ;

ಮಂತ್ರಜಪ ’ ಮೂರ್ಖತನ ’ ಅಲ್ಲ ಆದರೆ, ’ ಪರಮ ಯೋಗ ’ ಸಹ ಅಲ್ಲ.

ಅದರಲ್ಲಿ ಸಿಗುವುದು ಮನಸ್ಸಿಗೆ ತಾತ್ಕಾಲಿಕ ಉಪಶಮನ ಮಾತ್ರವೇ.

ಧ್ಯಾನಯೋಗವೇ ನಿಜವಾದ ಯೋಗ.

ಧ್ಯಾನಯೋಗ ಬೋಧಕರೇ ನಿಜವಾದ ಗುರುಗಳು.