“ಇದು ನಮ್ಮ ಧರ್ಮ”

ಇದು ನಮ್ಮ ರಾಜ್ಯ .. ಇದು ನಮ್ಮ ದೇಶ .. ಇದು ನಮ್ಮ ಧರ್ಮ .. ಇದು ನಮ್ಮ ಕೆಲಸ! ಇದು ಇತರರ ಕೆಲಸ ಅಲ್ಲವೇ ಅಲ್ಲ. ನಾವು ಎಲ್ಲಾ ಕೂಡಾ ಅನೇಕ ಜನ್ಮಗಳು ಹಿಮಾಲಯಗಳಲ್ಲಿ ತಪಸ್ಸು ಮಾಡಿ ಈ ಜನ್ಮದಲ್ಲಿ “ಪಿರಮಿಡ್ ಪಾರ್ಟಿ”ಯಲ್ಲಿ ಸೇರಿ .. ಧರ್ಮ ಸಂಸ್ಥಾಪನೆಗಾಗಿ ಬಂದಿದ್ದೇವೆ! ಎಲ್ಲರೂ ಪಿರಮಿಡ್ ಪಾರ್ಟಿಯೊಳಗೆ ಬರಬೇಕು .. ಎಲ್ಲರೂ ಸೇರಿ ಚೆನ್ನಾಗಿ ಕೆಲಸ ಮಾಡಬೇಕು!

“ಧ್ಯಾನ ಮಾಡುವವರಿಗೆ ರಾಜಕೀಯ ಏಕೆ?” ಎಂದು ತುಂಬಾ ಜನ ಕೇಳುತ್ತಿರುತ್ತಾರೆ! ಅದು ಸಹಜ! ಧ್ಯಾನ ಮಾಡುವವರಿಗೇ ರಾಜಕೀಯ ಎಂದು ನಾವು ಹೇಳುತ್ತೇವೆ. ಏಕೆಂದರೆ, ಆತ್ಮಜ್ಞಾನಿಗಳಿಗೆ ಮಾತ್ರವೇ ರಾಜ್ಯವನ್ನು ನಡೆಸುವ ನಿಪುಣತೆ ಇರುತ್ತದೆ. ನಮಗೆ ಯಾವ ರೀತಿಯ ‘ಹಾರಾಟ’ವಿಲ್ಲ, ಯಾವ ರೀತಿಯ ‘ಆಯಾಸ’ವಿಲ್ಲ .. ಮತ್ತೆ ‘ಪ್ರಯಾಸ’ ಇಲ್ಲವೇ ಇಲ್ಲ! ಹಾಯಾಗಿ ಕುಳಿತು ಧ್ಯಾನ ಮಾಡುತ್ತೇವೆ, ಪಾರ್ಟಿ ಕುರಿತು ಹೇಳುತ್ತೇವೆ! ಈ ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸಲು ಕೃಷಿ ಮಾಡುತ್ತೇವೆ!

“ಪ್ರಪಂಚದಲ್ಲಿರುವ ಹೊಲಸನ್ನು ತೆಗೆದು ಹಾಕಲಿಕ್ಕಾಗಿ ಕಂಕಣಬದ್ಧರಾದವರೇ ಕರ್ಮಯೋಗಿಗಳು; ಇದನ್ನೇ “ಕರ್ಮಯೋಗ” ಎಂದರು. ಆದ್ದರಿಂದ, “ಯಾರು ಬಂದರೂ ಬರದೇ ಇದ್ದರೂ ನಾನು ಒಬ್ಬನೇ ಪಿರಮಿಡ್ ಪಾರ್ಟಿಗಾಗಿ ಕೆಲಸ ಮಾಡುತ್ತಿರುತ್ತೇನೆ. ನಾನು ಒಬ್ಬನೇ ಧ್ಯಾನ ಪ್ರಚಾರ ಮಾಡಿಕೊಳ್ಳುತ್ತೇನೆ! ಹೀಗೆ ನನ್ನ ಧರ್ಮವನ್ನು ನಾನು ಆಚರಿಸುತ್ತೇನೆ ಎಂದುಕೊಳ್ಳುವವನೇ ಕರ್ಮಯೋಗಿ ಮತ್ತು ಇದನ್ನೇ ‘ಕರ್ಮಯೋಗ’ ಎಂದರು.

“ತ್ಯಾಗ”ದಿಂದ ಅಮೃತತ್ವ ಬರುತ್ತದೆ. “ಸ್ವಾರ್ಥ”ದ ಮೂಲಕ ಮೃತತ್ವ ಬರುತ್ತದೆ! “ನಾನು ಎಲ್ಲರನ್ನೂ ಕೊಳ್ಳೆಹೊಡೆಯಬೇಕು ಎನ್ನುವುದು ಮೃತತ್ವಕ್ಕೆ ದಾರಿಮಾಡಿಕೊಟ್ಟರೆ ನಾನು ಎಲ್ಲರಿಗೂ ಸಹಾಯ ಮಾಡಬೇಕು” ಎನ್ನುವುದು ಅಮೃತತ್ವಕ್ಕೆ ದಾರಿ ಮಾಡಿಕೊಡುತ್ತದೆ.

ನಮಗೆ ಎರಡು ರೀತಿಯ ದಾನಗಳಿವೆ: ಒಂದು ಶರೀರಕ್ಕೆ ದಾನ; ಎರಡನೆಯದು ಆತ್ಮಕ್ಕೆ ದಾನ. ಶರೀರಕ್ಕೆ ’ಅನ್ನದಾನ’ ಮಾಡಬೇಕು .. ಆತ್ಮಕ್ಕೆ ’ಜ್ಞಾನದಾನ’ ಮಾಡಬೇಕು! ‘ಆತ್ಮ’ ಎನ್ನುವುದು ಜ್ಞಾನದಿಂದಲೇ ಸಂತೃಪ್ತಿಯನ್ನು ಹೊಂದುತ್ತದೆ ಮತ್ತೆ ‘ಶರೀರ’ ಎನ್ನುವದು ಅನ್ನದಿಂದಲೇ ಸಂತೃಪ್ತಿ ಹೊಂದುತ್ತದೆ. ಆದ್ದರಿಂದ, ಯಾವುದಕ್ಕೆ ಏನು ಕೊಡಬೇಕೊ ಅದೇ ನೀಡಬೇಕು. ನಾವು ಒಂದು ‘ದೇಹ’, ಎರಡನೆಯದು ‘ದೇಹಿ’ .. ಒಂದು ‘ಶರೀರ’, ಎರಡನೆಯದು ‘ಆತ್ಮ’. ‘ಮಮಾತ್ಮ ಸರ್ವ ಭೂತಾತ್ಮ’ ಎನ್ನುವುದು ಆತ್ಮದ ತತ್ವ. ಆದ್ದರಿಂದ, ಎಲ್ಲಾ ಕಡೆ ಇರುವ ಆತ್ಮಕ್ಕೆ ನಾವು ಕೊಡಬೇಕಾಗಿರುವುದು ‘ಜ್ಞಾನ’.

ಪಿರಮಿಡ್ ಧ್ಯಾನ ಕೇಂದ್ರಗಳಿಗೆ ಬರುವವರಿಗೆಲ್ಲರಿಗೂ ’ಜ್ಞಾನದಾನ’ ನಡೆಯುತ್ತಲೇ ಇರುತ್ತದೆ. ಪ್ರತಿಯೊಬ್ಬರೂ ಧ್ಯಾನ ಸಾಧನೆ ಪ್ರಾರಂಭಿಸಿದರೆ .. ಪರಮಾತ್ಮರಾಗಿ ಬೆಳೆಯುತ್ತಾರೆ. ರಾಮ, ಕೃಷ್ಣರು ಕೂಡಾ ಸಂಸಾರಿಗಳೇ! ರಾಮ ವಸಿಷ್ಠರ ಹತ್ತಿರ .. ಶ್ರೀಕೃಷ್ಣನು ಸಾಂದೀಪನ ಹತ್ತಿರ ಜ್ಞಾನವನ್ನು ಕಲಿತರು.

ನೀವು ನನಗೆ ಹಣ ಕೊಡಬಹುದು ಆದರೆ .. ನಾನು ನಿಮಗೆ ಜ್ಞಾನವನ್ನು ನೀಡಲಾರೆ! ಅವರಿಗವರೇ ಧ್ಯಾನ ಮಾಡಿಕೊಂಡು ಜ್ಞಾನವನ್ನು ಪಡೆಯಬೇಕಾಗಿದೆ!