” ಆರೋಗ್ಯವೇ ಮಹಾಭಾಗ್ಯ “

“ಆರೋಗ್ಯ”

“ಆರೋಗ್ಯವೇಮಹಾಭಾಗ್ಯ” ಎಂದು ನಾವು ಬಾಲ್ಯದಿಂದ ಕೇಳುತ್ತಲೇ ಇದ್ದೇವೆ ಆದರೆ .. ದೊಡ್ಡವರಾದ ನಂತರ “ಮಹಾಭಾಗ್ಯ” ಎಂದರೆ ದೊಡ್ಡ ದೊಡ್ಡ ಮನೆಗಳನ್ನು ಕಟ್ಟುವುದು ಎಂದುಕೊಂಡಿದ್ದೇವೆ.

ಮಹಾಭಾಗ್ಯ ಎಂದರೆ ಆರೋಗ್ಯವೇ ಹೊರತು ಹಣವಲ್ಲ, ಆರೋಗ್ಯ ಎನ್ನುವುದೇ ಸಂಪತ್ತು. ಹಣ ಎನ್ನುವುದು ಭಾಗ್ಯವಲ್ಲ ..

ಆದ್ದರಿಂದ, ನಮ್ಮ ಮನಸ್ಸಿನಲ್ಲಿ ಆ ‘ಹಣ’ ಎನ್ನುವುದರ ಮೇಲೆ ಪ್ರಾಮುಖ್ಯತೆಯನ್ನು ತೆಗೆದುಹಾಕಿ ‘ಆರೋಗ್ಯ’ ಎನ್ನುವುದನ್ನು ಹಿಡಿದುಕೊಳ್ಳಬೇಕು. ಆಗಲೇ ಈ ‘ಆರೋಗ್ಯ’ ಎನ್ನುವ ಮಹಾಭಾಗ್ಯ ನಮ್ಮ ಒಳಗಿನಿಂದ ಬರುತ್ತದೆ.

“ಮಹಾ ಆರೋಗ್ಯ”

ನಮ್ಮ ಒಳಗೆ ನಾವು ಹೋಗಬೇಕು. ನಮ್ಮ ಒಳಗೆ ಹೋದರೆ ನಮ್ಮ ಶರೀರಕ್ಕೆ ಆರೋಗ್ಯ ಸಿಗುತ್ತದೆ.

ನಾನು ಈಗ ಮಹಾ ಆರೋಗ್ಯವಾಗಿದ್ದೇನೆ; ದಿನನಿತ್ಯ ಎಷ್ಟು ಓಡಾಡುತ್ತೇನೋ ನನಗೆ ತಿಳಿಯದು. ಎಷ್ಟು ಕೆಲಸ ಮಾಡುತ್ತೇನೋ ನನಗೆ ತಿಳಿಯದು. ಅಷ್ಟು ತಿರುಗುತ್ತಾ, ಅಷ್ಟು ಕೆಲಸಮಾಡುತ್ತಾ ಎಷ್ಟು ವರ್ಷಗಳಿಂದ ಓಡಾಡುತ್ತಿದ್ದೇನೊ ಲೆಕ್ಕವೇ ಇಲ್ಲ. ಮತ್ತೆ ನನಗೆ ಈ ಆರೋಗ್ಯ ಎಲ್ಲಿಂದ ಬಂದಿದೆ? ನಾನು ಯಾವ ವೈದ್ಯರ ಹತ್ತಿರ ಹೋಗಿದ್ದೇನೆ? ನಾನು ಯಾವ ಔಷಧಿ ಸೇವಿಸಿದ್ದೇನೆ? ನಾನು ಧ್ಯಾನ ಕಾರ್ಯಕ್ರಮಗಳನ್ನು ಕೈಹಿಡಿರುವುದರಿಂದಲೇ ನನಗೆ ಮಹಾ ಆರೋಗ್ಯ ಬಂದಿದೆ.

“ಧ್ಯಾನ ಸಾಧನೆ … ಅಂತರ್‌ಶರೀರಗಳು”

ಮೂವತ್ತು ವರ್ಷಗಳ ಹಿಂದೆ ನಾನು ತುಂಬಾ ಒಳಮುಖ ಪ್ರಯಾಣ ಮಾಡಿರುವುದರಿಂದ ನನಗೆ ಮಹಾ ಆರೋಗ್ಯ ಬಂದಿದೆ. ನನ್ನೊಳಗೆ ನಾನು ಹೋಗುತ್ತಾ … ಹೋಗುತ್ತಾ .. ಇನ್ನೇನೂ ಉಳಿದೇ ಇಲ್ಲ. ಅಲ್ಲಿಯವರೆಗೂ ಹೋಗಿದ್ದೇನೆ, ಮೊದಲು ಸ್ಥೂಲಶರೀರದಲ್ಲಿ ಇದ್ದೇನೆ. ಧ್ಯಾನ ಮಾಡುತ್ತಾ, ಮಾಡುತ್ತಾ ಸ್ಥೂಲಶರೀರ ಪಕ್ಕಕ್ಕೆ ಹೋಯಿತು .. ಸೂಕ್ಷ್ಮಶರೀರ ಬಂದಿದೆ. ಮತ್ತೆ ಅದರಲ್ಲಿ ಧ್ಯಾನ ಮಾಡಿದೆ. ಅದರಲ್ಲಿ ಧ್ಯಾನ ಮಾಡುತ್ತಾ ಮಾಡುತ್ತಾ .. ಮಾಡುತ್ತಾ .. ಸೂಕ್ಷ್ಮಶರೀರ ಪಕ್ಕಕ್ಕೆ ಹೋಗಿದೆ .. ಕಾರಣಶರೀರ ಬಂದಿದೆ. ಪುನಃ ಅದರಲ್ಲಿ ಇನ್ನೂ ಧ್ಯಾನ ಮಾಡುತ್ತಾ .. ಮಾಡುತ್ತಾ .. ಮಾಡುತ್ತಾ… ಕಾರಣಶರೀರ ಹೋಗಿದೆ .. ಮಹಾಕಾರಣಶರೀರ ಬಂದಿದೆ. ಇನ್ನೂ ಧ್ಯಾನ ಮಾಡುತ್ತಾ .. ಮಾಡುತ್ತಾ .. ಮಾಡುತ್ತಾ .. ಮಹಾಕಾರಣಶರೀರ ಹೋಗಿದೆ .. ಶೂನ್ಯ ಉಳಿದಿದೆ. ಆ ಶೂನ್ಯದಲ್ಲಿ ಇನ್ನೂ ಧ್ಯಾನ ಮಾಡುತ್ತಾ .. ಮಾಡುತ್ತಾ ಇದ್ದರೆ .. ಇನ್ನೂ ಮಹಾಶೂನ್ಯವೇ ಇದೆ. ಮಹಾಶೂನ್ಯದ ಆಚೆ ಏನೂ ಇಲ್ಲ.

ಮರಳಿ ಬಂದುಬಿಟ್ಟೆ. ಮರಳಿ ಬರುವಾಗ ಪುನಃ ಮಹಾಕಾರಣಶರೀರ ಕಾಣಿಸಿತು .. “ಓಹೋ” .. ಎಂದುಕೊಂಡೆ. ಮರಳಿ ಹಿಂದೆ ತಿರುಗಿ ಬರುತ್ತಿದ್ದಾಗ ಕಾರಣಶರೀರ ಕಾಣಿಸಿತು. “ಓಹೋ” .. ಎಂದು ಅದನ್ನು ಪುನಃ ಧರಿಸಿದೆ. ಇನ್ನೂ ಮರಳಿ ಬರುತ್ತಿದ್ದಾಗ ಸೂಕ್ಷ್ಮಶರೀರ ಕಾಣಿಸಿತು. “ಓಹೋ” .. ಎಂದು ಅದನ್ನೂ ಧರಿಸಿದೆ. ಕೊನೆಗೆ ಬಂದನಂತರ ಪುನಃ ಯಾವ ಮನೆಯಲ್ಲಿ ಈ ಸ್ಥೂಲಶರೀರ ಇದೆಯೋ .. ಧ್ಯಾನ ಮಾಡುತ್ತಾ .. ಪುನಃ ಆ ಶರೀರದೊಳಗೆ ಬಂದುಬಿಟ್ಟೆ.

“ನನಗೆ ಸರ್ವವೂ ತಿಳಿಯಿತು”

ಆಗ ನನಗೆ ಸರ್ವವೂ ತಿಳಿಯಿತು. ಸ್ಥೂಲಶರೀರ, ಸೂಕ್ಷ್ಮಶರೀರ, ಕಾರಣಶರೀರ, ಮಹಾಕಾರಣ ಶರೀರ ಇವೆಲ್ಲವೂ ಸಹ ನಾನೇ. ಸ್ಥೂಲ ಶರೀರವನ್ನು ‘ದೇಹ’ (ಬಾಡಿ) ಎನ್ನುತ್ತೇವೆ. ಸೂಕ್ಷ್ಮಶರೀರವನ್ನು ‘ಮನಸ್ಸು’ (ಮೈಂಡ್) ಎನ್ನುತ್ತೇವೆ. ಕಾರಣಶರೀರವನ್ನು ‘ಬುದ್ಧಿ’ (ಇಂಟಲೆಕ್ಟ್) ಎನ್ನುತ್ತೇವೆ. ಮಹಾಕಾರಣ ಶರೀರವನ್ನು ‘ಆತ್ಮಪದಾರ್ಥ’ ಎನ್ನುತ್ತೇವೆ. ಆದರೆ, ‘ನಾನು’ ಎನ್ನುವುದು ಒಂದು ಮಹಾಶೂನ್ಯ. ಬಾಡೀ, ಮೈಂಡ್, ಇಂಟಲೆಕ್ಟ್, ಆತ್ಮ, ಸರ್ವಾತ್ಮ .. ಮಹಾಶೂನ್ಯ.

ನಾವು ಇಲ್ಲಿ ಕುಳಿತುಕೊಂಡು ಸ್ಥೂಲಶರೀರದಿಂದ ಧ್ಯಾನ ಮಾಡುತ್ತಿದ್ದೇವೆ. ಈಗ ನಮ್ಮ ‘ಪ್ರಸ್ತುತ ವಿಳಾಸ’ ಸ್ಥೂಲಶರೀರ. ಅನಂತರ ಯಾವ ವಿಳಾಸಕ್ಕೆ (ಎಲ್ಲಿಗೆ) ನಾವು ಹೋಗಬೇಕು? ನಮ್ಮ ಸೂಕ್ಷ್ಮಶರೀರಕ್ಕೆ ಹೋಗಬೇಕು. ಅಲ್ಲಿಗೆ ಹೋಗಬೇಕಾದರೇ ಸ್ಥೂಲಶರೀರವನ್ನು ಬಿಟ್ಟುಬಿಡಬೇಕು. ಸ್ಥೂಲಶರೀರವನ್ನು ಬಿಟ್ಟರೇನೆ ಸೂಕ್ಷ್ಮಶರೀರದೊಳಗೆ, ಕಾರಣಶರೀರದೊಳಗೆ ಬರುತ್ತೇವೆ. ಈ ರೀತಿ ನಮಗೆ ಇರುವ ಈ ನಾಲ್ಕು ಶರೀರಗಳನ್ನು ಕ್ರಮೇಣ ಧ್ಯಾನದಲ್ಲಿ ನಾವು ನೋಡಿಕೊಳ್ಳಬೇಕು.

“ಐದು ಸತ್ಯಗಳು”

ದೇಹ, ಮನಸ್ಸು, ಬುದ್ಧಿ, ಆತ್ಮ, ಸರ್ವಾತ್ಮ. ದೇಹಚೈತನ್ಯದಲ್ಲಿ ಮಾತ್ರವೇ ಇದ್ದರೆ .. ಕುಡಿಯುವುದು, ತಿನ್ನುವುದು, ಮಲಗುವುದು .. (ಖಾನಾ, ಪೀನಾ, ಸೋನಾ) .. ಕುಂಭಕರ್ಣನಂತವನು.

ಶರೀರ .. ತಮೋಗುಣ .. ಕುಂಭಕರ್ಣನು
ಮನಸ್ಸು .. ರಜೋಗುಣ .. ರಾವಣಾಸುರನು
ಬುದ್ಧಿ .. ಸಾತ್ವಿಕಗುಣ .. ವಿಭೀಷಣನು
ಆತ್ಮ .. ಶುದ್ಧಸಾತ್ವಿಕ .. ಆಂಜನೇಯಸ್ವಾಮಿ
ಮಹಾಶೂನ್ಯ .. ನಿರ್ಗುಣ .. ಶ್ರೀರಾಮನು

ಮನಸ್ಸಿನಲ್ಲಿದ್ದರೇ ರಾವಣಾಸುರನಂತವನು. ಕಾರಣಶರೀರದಲ್ಲಿದ್ದರೇ ವಿಭೀಷಣನಂತವನು, ಮಹಾಕಾರಣಶರೀರದಲ್ಲಿದ್ದರೇ ಆಂಜನೇಯಸ್ವಾಮಿ ಅಂತಹವನು. ಮತ್ತು ಈ ಮಹಾಶೂನ್ಯದಲ್ಲಿದ್ದರೆ .. ಅದು ಶ್ರೀರಾಮನು.

ಶರೀರ ಸತ್ಯವಾ? .. ಸತ್ಯವೇ.
ಮನಸ್ಸು ಸತ್ಯವಾ? .. ಸತ್ಯವೇ.
ಬುದ್ಧಿ ಸತ್ಯವಾ? .. ಸತ್ಯವೇ.
ಆತ್ಮ ಸತ್ಯವಾ? .. ಸತ್ಯವೇ.
ಮಹಾಶೂನ್ಯ ಸತ್ಯವಾ? .. ಸತ್ಯವೇ.

“ನಾವು ಐದು ಸತ್ಯಗಳನ್ನು ಒಳಗೊಂಡವರು”

ಮಹಾಶೂನ್ಯ ಎನ್ನುವುದು ಸತ್ಯ, ಬುದ್ಧಿ ಎನ್ನುವುದು ಸತ್ಯ, ಮನಸ್ಸು ಎನ್ನುವುದು ಸತ್ಯ, ಶರೀರ ಎನ್ನುವುದು ಸತ್ಯ. ಎಲ್ಲಾ ಸೇರಿ ನಾವು ಐದು ಸತ್ಯಗಳನ್ನು ಒಳಗೊಂಡಿರುವವರು.

ಸಾಯುವಾಗ ಒಂದು ಸತ್ಯ ಬೇರ್ಪಡುತ್ತದೆ. ಉಳಿದ ನಾಲ್ಕು ಸತ್ಯಗಳು ಒಳಗೊಂಡಿರುತ್ತವೆ. ಇನ್ನೂ ಕೆಲವು ದಿನಗಳು ಕಳೆದನಂತರ ಮೂರು ಸತ್ಯಗಳು ಉಳಿಯುತ್ತವೆ. ಇನ್ನೂ ಕೆಲವು ದಿನಗಳನಂತರ ಎರಡು ಸತ್ಯಗಳಿಂದ ಕೂಡಿದವರಾಗಿರುತ್ತೇವೆ. ಇನ್ನೂ ದೂರ ಹೋದರೆ ಅದೂ ಸಹ ಹೊರಟುಹೋಗುತ್ತದೆ.

ಏಕೋ ನಾರಾಯಣ. ನಾವು ಇಲ್ಲಿ ಉಳಿಯುತ್ತೇವೆ, ಅಲ್ಲಿದೆ ನಮ್ಮ ಪ್ರಥಮ ಮೂಲತತ್ವ. “ಓಹೋ .. ಇದಕ್ಕಿಂತಾ ಬೇರೇ ಏನೂ ಇಲ್ಲ ಎಂದು ಮತ್ತೆ ಹಿಂದಕ್ಕೆ ತಿರುಗಿ ಬರುತ್ತೇವೆ. ಮರಳಿ ಬಂದು ಬಗೆಬಗೆಯು ಶರೀರಗಳಲ್ಲಿ ಹಾಯಾಗಿ ಪ್ರವೇಶಿಸುತ್ತೇವೆ. ಇನ್ನು ರೋಗಗಳು ಇಲ್ಲದೇ ಸ್ಥೂಲಶರೀರದಲ್ಲಿ ಹಾಯಾಗಿ ಜೀವಿಸುತ್ತೇವೆ. ಅಶಾಂತಿ ಇಲ್ಲದೇ ಸೂಕ್ಷ್ಮಶರೀರದಲ್ಲಿ, ಅಂದರೆ, ಮನಸ್ಸಿನಲ್ಲಿ ಹಾಯಾಗಿ ಜೀವಿಸುತ್ತೇವೆ. ಎಲ್ಲಿಯೂ ಅಸತ್ಯವಿಲ್ಲದೇ ಕಾರಣಶರೀರದಲ್ಲಿ, ಅಂದರೆ, ಬುದ್ಧಿಯಲ್ಲಿ ಹಾಯಾಗಿ ಜೀವಿಸುತ್ತೇವೆ. ಇನ್ನು ಆತ್ಮದಲ್ಲಿ ಬಂಧನವಿರುವುದಿಲ್ಲ.

ಶರೀರದಿಂದ ಸರ್ವಾತ್ಮ ಹತ್ತಿರಕ್ಕೆ ಹೋಗಿ ಮತ್ತೆ ಸರ್ವಾತ್ಮದಿಂದ ಶರೀರಕ್ಕೆ ಬರಬೇಕು. ಈ ಪ್ರಯಾಣದ ಹೆಸರೇ ಧ್ಯಾನ, ಜ್ಞಾನ.

” ಸಾಕ್ರೆಟೀಸ್ .. ವಿಷಪಾತ್ರೆ”

ನಮ್ಮ ಮನಸ್ಸಿನಲ್ಲಿ ಎಂದಿಗೂ ‘ಶಾಂತಿ’ ಎನ್ನುವುದು ಇರಬೇಕು. ಸಾಕ್ರೆಟೀಸ್‌ಗೆ ವಿಷಪಾತ್ರೆ ಕೊಟ್ಟರೆ “ಕೊಡಪ್ಪಾ” ಎಂದನು. ಅವರು ಅದಕ್ಕೂ ಮುಂಚೆ ಸರ್ವಾತ್ಮದ ಹತ್ತಿರಕ್ಕೆ ಹೋಗಿ ಪುನಃ ಶರೀರದೊಳಗೆ ಬಂದು ಸೇರಿದ್ದನು. “ನಾನು” ಎನ್ನುವುದು ಒಂದು ಮಹಾಶೂನ್ಯವಾದಾಗ ಇನ್ನೊಬ್ಬರು ವಿಷಪಾತ್ರೆ ಕೊಡಲು ಹೇಗೆ ಸಾಧ್ಯ?.

ಯಾರು ಧ್ಯಾನ ಮಾಡುತ್ತಾರೋ .. ಜ್ಞಾನದಿಂದ .. ಜೀವನದಲ್ಲಿ ಮುಕ್ತಿ ಬರುತ್ತದೆ. ‘ಮುಕ್ತಿ’ ಅಂದರೆ ಮನಸ್ಸಿನಲ್ಲಿ ಅಶಾಂತಿ ಇರಬಾರದು .. ಬುದ್ಧಿಯಲ್ಲಿ ಅಸತ್ಯ ಇರಬಾರದು .. ಆತ್ಮದಲ್ಲಿ ಬಂಧನ ಇರಬಾರದು.

ಮುಕ್ತಿಯಿಂದ ಇರುವವನಿಗೆ ಹೆಂಡತಿ ಇರುತ್ತಾಳೆ. ಆದರೆ, ಬಂಧನ ಇರದು. ಹೆಂಡತಿಯ ಜೊತೆ ಬಂಧನ ಇದ್ದರೆ .. ಅದು ಅಮೋಕ್ಷ. ಹೆಂಡತಿ ಇದ್ದು ಹೆಂಡತಿಯೊಂದಿಗೆ ಬಂಧನ ಇಲ್ಲದಿದ್ದರೆ ಅದು ಮೋಕ್ಷ. ಶರೀರವಿದ್ದು ಶರೀರದ ಮೇಲೆ ಬಂಧನ ಇಲ್ಲದಿದ್ದರೆ ಅದು ಮೋಕ್ಷ. ಶರೀರ ಇದ್ದು ಶರೀರದ ಮೇಲೆ ಬಂಧನ ಇದ್ದರೆ ಅದು ಅಮೋಕ್ಷ. ಅಮೋಕ್ಷದಿಂದ ಮೋಕ್ಷಕ್ಕೆ ಹೋಗುವುದು ಧ್ಯಾನದಿಂದ ಮಾತ್ರ ಸಾಧ್ಯ.

”ಪರಮಾತ್ಮ .. ಪರಮ ಆರೋಗ್ಯ”

ನಾನು .. ಒಂದು ಕಾಲದಲ್ಲಿ .. ಅಂದರೆ ಒಂದು 65 ವರ್ಷಗಳ ಹಿಂದೆ .. ಒಂದು ಚಿಕ್ಕಮಗು. ಈಗ ಇಷ್ಟು ದೊಡ್ಡವನಾಗಿದ್ದೇನೆ. ಇಲ್ಲಿ ಇರುವವರೆಲ್ಲರೂ ಅಷ್ಟೇ. ಒಂದು ಕಾಲದಲ್ಲಿ ಎಲ್ಲರೂ ಚಿಕ್ಕ ಮಕ್ಕಳು .. ಈಗ ಅವರು ಕೂಡಾ ಮಕ್ಕಳನ್ನು ಸೃಷ್ಟಿಸುತ್ತಿದ್ದಾರೆ. ಹಾಗೇ ನಾವು ಒಂದು ಕಾಲದಲ್ಲಿ ಚಿಕ್ಕ ಶೈಶವ ಆತ್ಮವಾಗಿ ಇದ್ದು .. ಈ ಧ್ಯಾನದಲ್ಲಿ ಒಳಗೆ ಒಳಗೆ ಹೋಗಿ .. ಆತ್ಮಜ್ಞಾನದಿಂದ ಮರಳಿ ಬಂದು ಹೊರಗೆ ಒಬ್ಬ ಪರಮಾತ್ಮನಂತೆ ಮೆರೆಯುತ್ತಿದ್ದೇವೆ. ಬುದ್ಧ ಪರಮಾತ್ಮನ ಹಾಗೆ. ಕೃಷ್ಣ ಪರಮಾತ್ಮನ ಹಾಗೆ, ಮತ್ತು ನಾವು ಕೂಡಾ ಒಬ್ಬ ಪರಮಾತ್ಮ ಆಗುತ್ತೇವೆ.

”ಪರಮಾತ್ಮ ಆಗುವುದು ಆಶ್ಚರ್ಯಕರವಲ್ಲ”

“ಪ್ರತಿಯೊಂದು ಆತ್ಮವು ಕೂಡಾ ಯಾವುದೋ ಒಂದು ದಿನ ಪರಮಾತ್ಮ ಆಗುತ್ತದೆ” ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಒಂದು ಮಗು ಬೆಳೆಯುವುದು ಸಹಜ ತಾನೆ? ಬೆಳೆಯದೇ ಇದ್ದರೆ ಅದು ಸಹಜವೇನು? ಬೆಳದರೆ ಮಾತ್ರವೇ ಅದು ಸಹಜ .. ಬೆಳೆಯದಿದ್ದರೆ ಮಾತ್ರ ಅದು ಅಸಹಜ. ಹಾಗೆಯೇ, ನಾವೆಲ್ಲಾ ಪರಮಾತ್ಮಗಳಾಗದೆ ಇದ್ದರೆ ಅಸಹಜ ಮತ್ತು ಆದರೆ ಮಾತ್ರವೇ ಅದು ಸಹಜ. ಪರಮಾತ್ಮ ಆಗುವುದು ಆಶ್ಚರ್ಯಕರವಲ್ಲ .. ಪರಮಾತ್ಮ ಆಗಿದಿರುವುದೇ ಆಶ್ಚರ್ಯಕರ.

ನಾವು ಆತ್ಮಜ್ಞಾನದಿಂದ ಪರಮಾತ್ಮರಾದರೆ “ದೊಡ್ಡಸ್ತಿಕೆ” ಎನೂ ಅಲ್ಲ. ಆದರೆ .. “ಸರಿಯಾದವರು” ಒಂದು ಮಗು ಬೆಳೆದರೆ “ದೊಡ್ಡಸ್ತಿಕೆ” ಏನಾದರೂ ಇದೆಯಾ? ಮತ್ತೆ ಏನು ಮಾಡಿದರೆ ಈ ಮಗುವಿಗೆ “ದೊಡ್ಡಸ್ತಿಕೆ” ಬರುತ್ತದೆ? ಲೋಕಕಲ್ಯಾಣದಲ್ಲಿ ಇದ್ದರೆ ಮಹತ್‌ಕಾರ್ಯ ಮಾಡಿದಂತೆ. ಸ್ವಂತ ಕಲ್ಯಾಣವಾದರೇ ಅದರಲ್ಲಿ ಏನೂ ಹಿರಿತನವಿಲ್ಲ. ಆದರೆ ನಮ್ಮಿಂದ ಲೋಕಕಲ್ಯಾಣವಾದರೆ ಮಾತ್ರವೇ ಅದು ಶ್ರೇಯಸ್ಕರ.

”ಸುಖ .. ಆನಂದ”

ಲೋಕಕಲ್ಯಾಣ ಕಾರ್ಯಕ್ರಮವೇ ಉದಾತ್ತವಾದ ಕಾರ್ಯಕ್ರಮ. ನಾವು ಧ್ಯಾನಮಾಡಿ ಉದ್ಧಾರ ಆಗುವುದು ಸಹಜ. ಧ್ಯಾನ ಮಾಡದೆ ಹಾಗೇ ಇರುವುದು ಅಸಹಜ. ಆದರೆ, ಇತರರಿಗೆ ಧ್ಯಾನ ಹೇಳಿಕೊಡುವುದೇ ಲೋಕೋತ್ತರ ಕಾರ್ಯಕ್ರಮ. ಆಗಲೇ ನಾವು ಶ್ರೇಷ್ಠರು. ನನ್ನ ಕಲ್ಯಾಣ ನನಗೆ ಆನಂದವನ್ನು ನೀಡುತ್ತದೆ. ಆದರೆ, ಪರರಿಗೆ ಕಲ್ಯಾಣ ಉಂಟು ಮಾಡಿದರೆ ಮಾತ್ರವೇ ನನಗೆ ಮಹದಾನಂದವಾಗುತ್ತದೆ.

“ಸುಖ” ಎನ್ನುವ ಪದ ಚಿಕ್ಕದು. ಸುಖ ಶಾರೀರಿಕವಾದದ್ದು, “ಆನಂದ” ಆತ್ಮಪರವಾದದ್ದು. ಆನಂದ ಎನ್ನುವ ಪದ ದೊಡ್ಡದು. ಸುಖ ಎನ್ನುವುದು ಸ್ಥೂಲಶರೀರಕ್ಕೆ ಸಂಬಂಧಿಸಿದ್ದು. ಆನಂದ ಮಹಾಕಾರಣಶರೀರಕ್ಕೆ ಸಂಬಂಧಿಸಿದ್ದು. ರಸಗುಲ್ಲಾ ತಿಂದರೆ .. ಶರೀರಕ್ಕೆ ಸುಖ. ಒಳ್ಳೆಯ ಭಜನೆ ಕೇಳಿಸಿಕೊಂಡರೆ ಮನಸ್ಸಿಗೆ ಉಲ್ಲಾಸ, ಸಂತೋಷ. ಒಳ್ಳೆಯ ಪುಸ್ತಕ ಓದಿದರೆ ಬುದ್ಧಿಗೆ ವಿಜ್ಞಾನ, ವಿಕಾಸ. ಧ್ಯಾನ ಮಾಡಿದರೆ ಮಾತ್ರವೇ ಆತ್ಮಕ್ಕೆ ಆನಂದ. ಆದರೆ … ಇನ್ನೊಬ್ಬರಿಗೆ ಸಹಾಯ ಮಾಡಿದರೆ ಅದು ಮಹದಾನಂದ … ಇನ್ನು ಪ್ರಪಂಚಕ್ಕೆಲ್ಲಾ ಸಹಾಯ ಮಾಡಿದರೆ ಬ್ರಹ್ಮಾನಂದ.

ಶರೀರವತ್ .. ಸುಖ
ಮನೋವತ್ .. ಉಲ್ಲಾಸ, ಸಂತೋಷ
ಬುದ್ಧಿವತ್ .. ವಿಜ್ಞಾನ, ವಿಕಾಸ
ಆತ್ಮವತ್ .. ಆನಂದ
ಲೋಕಕಲ್ಯಾಣವತ್ .. ಬ್ರಹ್ಮಾನಂದ

ಆತ್ಮವತ್ ಸುಖವನ್ನೇ ‘ಆನಂದ’ ಎನ್ನುತ್ತೇವೆ. ಪಕ್ಕದವರಿಂದ ಧ್ಯಾನ ಮಾಡಿಸುವುದರ ಮೂಲಕ ಮಹದಾನಂದ. ನಮಗೆ ಸುಖಗಳು ಬೇಕು, ಸಂತೋಷಗಳೂ ಬೇಕು … ಮತ್ತು ಆನಂದವೂ ಬೇಕು.

”ಪರಿಪೂರ್ಣ ಜೀವನ”

ನಾವು ಮನೆಯಲ್ಲಿ ಕುಳಿತುಕೊಂಡು ಕೇವಲ ನಮ್ಮ ಸುಖ ನಾವು ನೋಡಿಕೊಳ್ಳುವುದಲ್ಲ. ನಾವು ಎಲ್ಲರ ಸುಖವು ಸಹ ನೋಡಿಕೊಳ್ಳಬೇಕು. ನಮ್ಮ ಸುಖ ನಾವು ನೋಡಿಕೊಳ್ಳುವುದು ಎನ್ನುವುದು ಕಾರಣದಿಂದ ಮಾಡುವ ಕಾರ್ಯ. ಆದರೆ, ಎಲ್ಲರ ಸುಖಕ್ಕೂ ಮೂಲಭೂತವಾಗುವುದು ಎನ್ನುವುದು ಅಕಾರಣದಿಂದ ಮಾಡುವ ಕ್ರಿಯೆ. ಎಲ್ಲರೂ ಸಹ ಸರ್ವಾತ್ಮರಾಗಿ ಪರಮಾತ್ಮರಾಗುವಂತಾಗಲಿ. ಆ ಸ್ಥಿತಿಗೆ ಎಲ್ಲರೂ ತಲುಪಬೇಕಾದರೆ ಧ್ಯಾನ ಪ್ರಚಾರ, ಧ್ಯಾನಬೋಧನೆ, ಈ ಎರಡರ ಅವಶ್ಯಕತೆ ತುಂಬಾ ಇದೆ.

ಆತ್ಮವತ್ ನಾವೆಲ್ಲರೂ ಒಂದೇ .. ಶರೀರವತ್ ಬೇರೆ ಬೇರೆ .. ಮನೋವತ್ ಬೇರೆ ಬೇರೆ .. ಬುದ್ಧಿವತ್ ಬೇರೆ ಬೇರೆ; ಆದರೆ, ಆತ್ಮವತ್ ನಾವೆಲ್ಲರೂ ಒಂದೇ.

ಶರೀರವತ್ ನರನು, ಸರ್ವಾತ್ಮವತ್ ನಾರಾಯಣನು. ಹನುಮಂತನು ‘ಚಿಕ್ಕ’ ನಾರಾಯಣನು. ಶ್ರೀರಾಮನು ‘ದೊಡ್ಡ’ ನಾರಾಯಣನು. ಅದಕ್ಕೆ ಎನ್ನುತ್ತಾನೆ “ನಾನು ನಿನ್ನ ಸೇವಕನು” ಎಂದು, ವಿಭೀಷಣನು ‘ನಾರಾಯಣನು’ ಅಲ್ಲ, ರಾವಣನು ‘ನಾರಾಯಣನು’ ಅಲ್ಲ .. ಎಲ್ಲಾ ನರರೇ. ಸಾಯುವ ಮುಂಚೆ ನಾವು ಎಲ್ಲಾ ನೋಡಬೇಕು. ಸುಖಗಳು, ಸಂತೋಷಗಳು, ಆನಂದಗಳು … ಎಲ್ಲಾ ನೋಡಬೇಕು. ಅದೇ ಪರಿಪೂರ್ಣ ಜೀವನ.

”ಧ್ಯಾನ ಸರ್ವಪ್ರದಾತ”

ಧ್ಯಾನ ಮಾಡಿದರೆ ಮಾತ್ರವೇ ಶಾರೀರಕ ಆರೋಗ್ಯ ಬರುತ್ತದೆ. ಧ್ಯಾನ ಮಾಡದೇ ಇದ್ದರೆ ಬರುವುದಿಲ್ಲ. ಧ್ಯಾನ ಮಾಡಿದರೆ ಮಾತ್ರವೇ ಮಾನಸಿಕ ಶಾಂತಿ ಸಿಗುತ್ತದೆ. ಧ್ಯಾನ ಮಾಡದಿದ್ದರೆ ಮಾನಸಿಕ ಶಾಂತಿ ಬರುವುದಿಲ್ಲ. ಧ್ಯಾನ ಮಾಡಿದರೆ ಸಕಲ ಗ್ರಂಥಗಳ ಅರಿವಾಗುತ್ತದೆ. ವಿಚಾರ ಸುಲಭವಾಗಿ ಅರ್ಥವಾಗುತ್ತದೆ. ಪುಸ್ತಕ ಅರ್ಥವಾದರೆ ಬುದ್ಧಿ ವಿಕಾಸ ಹೊಂದುತ್ತದೆ. ಭಗವದ್ಗೀತೆ ಓದಿದಾಗ ನನಗೆ ಎಲ್ಲಾ ಅರ್ಥವಾಯಿತು. ನಾನು ನನ್ನ ೧೫ನೆಯ ವಯಸ್ಸಿನಲ್ಲಿ ಪಂಡಿತ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಇಂಡಿಯನ್ ಫಿಲಾಸಫಿ ಎರಡು ಭಾಗಗಳನ್ನು ಓದಿದೆ. ಓದುತ್ತಿರುವಾಗಲೇ ನನಗೆ ಎಲ್ಲಾ ಅರ್ಥವಾಗಿಬಿಡುತ್ತಿತ್ತು. ಎರಡನೆಯ ಬಾರಿ ಮತ್ತೆ ಓದುವ ಅವಶ್ಯಕತೆ ಇರುತ್ತಿರಲಿಲ್ಲ.

”ಮಾಡಿದ್ದೇ ಮಾಡುವುದಿಲ್ಲ”

ನಾವೆಲ್ಲಾ ಗತಜನ್ಮಗಳಿಂದ ಈ ಜನ್ಮಕ್ಕೆ ಬಂದಿದ್ದೇವೆ. ಈ ಜನ್ಮದಲ್ಲಿ ನಾವು ಗತಜನ್ಮಗಳಲ್ಲಿ ಮಾಡಿದ್ದೆಲ್ಲಾ ಮಾಡಬೇಕಾಗಿಲ್ಲ. ಇನ್ನೇನೊ ಹೊಸ ಹೊಸದಾಗಿ ಮಾಡಲು ಬಂದಿದ್ದೇವೆ. ಗತಜನ್ಮಗಳಲ್ಲಿ ಮಾಡಿದ್ದೆಲ್ಲಾ ನಮಗೆ ಸಹಜವಾಗಿಯೇ ಅರಿವಾಗುತ್ತಿರುತ್ತವೆ. ಶ್ರೀ ಮಂಗಳಂಪಲ್ಲಿ ಬಾಲ ಮುರಳೀಕೃಷ್ಣ ಅವರು ಬಾಲ್ಯದಿಂದಲೇ ಸಂಗೀತ ಕಚೇರಿಗಳನ್ನು ಮಾಡಿದರು. ನಾವು ಏಕೆ ಮಾಡುತ್ತಿಲ್ಲ? ಅವರು ಗತಜನ್ಮದಲ್ಲೇ ಸಂಗೀತವನ್ನೆಲ್ಲಾ ಕಲಿತಿದ್ದಾರೆ.

ಪ್ರಹ್ಲಾದನಿಗೆ ಗತಜನ್ಮಗಳಲ್ಲಿ ಆತ್ಮಜ್ಞಾನವೆಲ್ಲಾ ಆಗಿಬಿಟ್ಟಿದೆ. ಕೃಷ್ಣನಿಗೆ ಧ್ಯಾನ ಸಂಪೂರ್ಣವಾಗಿ .. ಗತಜನ್ಮಗಳಲ್ಲಿ ಆಗಿಹೋಗಿದೆ. ಗತಜನ್ಮಗಳಲ್ಲಿ ಆಗಿರುವುದು ಪುನಃ ಪುನರಾವೃತ್ತಿ ಮಾಡುವುದಿಲ್ಲ. ಓದಿದ್ದನ್ನೇ ಎಂದಿಗೂ ಓದುವುದಿಲ್ಲ. ಹೊಸದಾಗಿ ಇನ್ನೇನೋ ಮಾಡಲು ಬರುತ್ತೇವೆ.

ಗತಜನ್ಮದಲ್ಲಿ ಧ್ಯಾನ ಪ್ರಚಾರ ಮಾಡಲಿಲ್ಲ ಎಂದುಕೊಳ್ಳೋಣ .. ಈ ಜನ್ಮದಲ್ಲಿ ಧ್ಯಾನ ಪ್ರಚಾರಕ್ಕಾಗಿ ಬರುತ್ತೇವೆ. ಈ ಜನ್ಮ ಎನ್ನುವುದು ಗತಜನ್ಮಗಳಿಂದ ಬಂದಂತಹ ಮತ್ತೊಂದು ಪುಟ. ಯಾರು ಧ್ಯಾನ ಪ್ರಚಾರ ಮಾಡುತ್ತಾರೋ ಅವರಿಗೆ … ಪುನರ್ಜನ್ಮ ಇಲ್ಲ; “ಇಲ್ಲ” ಅಂದರೆ .. “ಬೇಕಾದರೆ ಮಾತ್ರವೇ ಬರುತ್ತಾರೆ” ಆದರೆ, ಅಷ್ಟಾಗಿ ‘ಬೇಕು’ ಎಂದು ಅನ್ನಿಸುವುದಿಲ್ಲ.

ಎಲ್ಲಿ ನಾವು ಮಾಡಬೇಕಾದ ಕೆಲಸ ಇರುವುದಿಲ್ಲವೋ ಅಲ್ಲಿಗೆ ನಾವು ಹೋಗುವುದಿಲ್ಲ. ಮಾಡಬೇಕಾದ ಕೆಲಸ ಎಲ್ಲಿ ಇರುತ್ತದೆಯೋ ಅಲ್ಲಿಗೇ ನಾವು ಹೋಗುತ್ತೇವೆ. ಅದು ಭೂಲೋಕವಾಗಲಿ, ಮತ್ತು ಇನ್ನೊಂದು ಲೋಕವಾಗಲಿ. ಮಾಡಬೇಕಾದ ಕೆಲಸ ಉಳಿದಿದ್ದರೆ ತಪ್ಪದೇ ಅದಕ್ಕಾಗಿ ಪುನಃ ನಾವು ಮರಳಿ ಬರುತ್ತೇವೆ. ಮಾಡಬೇಕಾದ ಕೆಲಸ ಇಲ್ಲದಿದ್ದರೆ ನಾವು ಇಲ್ಲಿಗೆ ಬರುವುದಿಲ್ಲ. ಇನ್ನೊಂದು ಕಡೆ ಹೋಗುತ್ತೇವೆ.

ಯುಕ್ತಾಹಾರ + ಮಿತಾಹಾರ + ನಿರಾಹಾರ
ಯುಕ್ತಭಾಷಣ + ಮಿತಭಾಷಣ + ನಿರ್‌ಭಾಷಣ
ಯುಕ್ತಯೋಚನೆ + ಮಿತಯೋಚನೆ + ನಿರ್‌ಯೋಚನೆ

ಶಾರೀರಕ ಆರೋಗ್ಯಕ್ಕಾಗಿ … ಯುಕ್ತಾಹಾರ, ಮಿತಾಹಾರ ಮತ್ತು ನಿರಾಹಾರ. ಅದೇ ರೀತಿ ಮಾನಸಿಕ ಶಾಂತಿ ಇರಬೇಕಾದರೇ ಯುಕ್ತ ಭಾಷಣ, ಮಿತ ಭಾಷಣ, ನಿರ್‌ಯೋಚನೆ.

ಬುದ್ಧಿಪರವಾದ ಆರೋಗ್ಯಕ್ಕೆ .. ಯುಕ್ತ ಯೋಚನೆ, ಮಿತಯೋಚನೆ ಮತ್ತು ನಿರ್‌ಯೋಚನೆ. ‘ನಿರ್‌ಯೋಚನೆ’ ಎಂದರೆ ಧ್ಯಾನ. ಆದ್ದರಿಂದ, ಈ ಆರೋಗ್ಯ ಸೂತ್ರಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರೆ ನಮಗೆ ನಮ್ಮ ಆರೋಗ್ಯ ಮಹಾಭಾಗ್ಯವಾಗಿ ಪರಿಣಮಿಸುತ್ತದೆ.

– ಬ್ರಹ್ಮರ್ಷಿ ಪತ್ರೀಜಿ