“ಆತ್ಮ ಸಿಹಿಯಾಗಿರಬೇಕು ಮಗು”

ತಿನ್ನುತ್ತಾ ತಿನ್ನುತ್ತಾ ಹೋದರೆ ಬೇವಿನ ಹಣ್ಣು ಸಹ ಸಿಹಿಯಾಗಿರುತ್ತದೆ
ಹಾಡುತ್ತಾ ಹಾಡುತ್ತಾ ರಾಗ ಸಹ ಅತಿಶಯವಾಗಿರುತ್ತದೆ
Practice makes man Perfect
ಈ ಭೂಮಿಯ ಮೇಲೆ ಕೆಲಸಗಳು ಸಾಧನೆಯಿಂದ ಸಿದ್ಧಿಸುತ್ತವೆ
ಮಾನವನಿಗೆ ಅಸಾಧ್ಯ ಎಂಬುವುದು ಯಾವುದೂ ಇಲ್ಲ

ಮಾನವನು ಪರ್ವತಗಳನ್ನು ಸಹ ಏರಬಲ್ಲ
ಮಾನವನು ಸಮುದ್ರಗಳನ್ನು ಲಂಘಿಸಬಲ್ಲ (ಹಾರಬಲ್ಲ)
ಮಾನವನು ಚಂದ್ರನ ಮೇಲೆ ಕಾಲಿಡಬಲ್ಲ
ಮಾನವನು ಧ್ಯಾನ ಮಾಡಬಲ್ಲ
ಮಾನವನು ತಪಸ್ಸು ಮಾಡಬಲ್ಲ
ಮಾನವನು ತ್ರಿನೇತ್ರನಾಗಬಲ್ಲ
ಮಾನವನು ತನ್ನ ಆತ್ಮಮೂಲಗಳನ್ನು ತಿಳಿಯಬಲ್ಲ
ಮಾನವನು ಸಕಲ ಸೃಷ್ಟಿಯ ರಹಸ್ಯಗಳನ್ನು ದರ್ಶಿಸಬಲ್ಲ

ಬೀಜದಲ್ಲಿ ಮಹಾವೃಕ್ಷ ಅಡಗಿರುವ ಹಾಗೆ
ಮಾನವನಲ್ಲಿ ಮಹಾಶಕ್ತಿ ಅಡಗಿದೆ
ಆ ಮಹಾಶಕ್ತಿಯನ್ನು ಹೊರತರುವ ಮಾರ್ಗವೇ…
ನಿರಂತರ ಸಾಧನೆ, ಅಡಚಣೆಯಿಲ್ಲದ ದೀಕ್ಷೆ
ಸಾಮಾನ್ಯ ಪ್ರಾಣಿಗಳ ಹಾಗೆ ಜೀವಿಸಿದರೆ…
ಮಾನವನ ಜೀವನಕ್ಕೆ ನಿಜವಾದ ಅರ್ಥವಿಲ್ಲ

ಆತ್ಮ ಮಹಾಶಕ್ತಿಯನ್ನು ಹೊರತೆಗೆಯುವುದೇ ಮಾನವ ಜೀವನದ ಗುರಿ
ಹನಿ,ಹನಿ ಸೇರಿದರೆ ಮಹಾಸಮುದ್ರವಾಗುತ್ತದೆ
ಮನುಷ್ಯ ಪ್ರತಿದಿನ ಖಂಡಿತ ಧ್ಯಾನ ಸಾಧನೆ ಮಾಡಬೇಕು
ಈ ಭೂಮಿಯ ಮೇಲೆ ಎಲ್ಲಾ ಕೆಲಸಗಳು ಧ್ಯಾನ ಸಾಧನೆಯಿಂದ ಸಿದ್ಧಿಸುತ್ತವೆ
ಧ್ಯಾನ ಸಾಧನೆ ಮಾಡುತ್ತಾ ಮಾಡುತ್ತಾ ಆತ್ಮಶಕ್ತಿ ಅತಿಶಯವಾಗುತ್ತದೆ
ಆತ್ಮಾಮೃತ ಸೇವಿಸುತ್ತಾ, ಸೇವಿಸುತ್ತಾ ಆತ್ಮ ಸಿಹಿಯಾಗಿರುವುದು
Practice of Meditation makes man Perfect
“ಆತ್ಮ ಸಿಹಿಯಾಗಿರಬೇಕು ಮಗು”