“ಆತ್ಮಜ್ಞಾನ”

 

“ನಾವು ’ ದೇಹ ’ ಅಲ್ಲ; ’ ದೇಹಾತ್ಮ ’ ಎಂದು ತಿಳಿದುಕೊಳ್ಳಬೇಕು. ಧ್ಯಾನ ಸಾಧನೆಯಿಂದ ವಿಶ್ವಾತ್ಮವಾಗಿ, ’ ವಿರಾಟ್ ಆತ್ಮ ’ವಾಗಿ ಬೆಳಗಬೇಕು. ’ ನರಸ್ಥಿತಿ ’ಯಿಂದ ’ ನಾರಾಯಣ ಸ್ಥಿತಿ ’ಗೆ ಬೆಳೆಯುವುದೇ ನಮ್ಮ ಗಮ್ಯಸ್ಥಾನ. ಈ ಜೀವನದಲ್ಲಿ ಮಾಡಿದ ಪುಣ್ಯದಿಂದ, ಮೇಲಿನ ಲೋಕಗಳಿಗೆ ಹೋಗಿ ಭೋಗವನ್ನು ಅನುಭವಿಸುತ್ತೇವೆ … ಪುಣ್ಯಗಳು ಕ್ಷೀಣಿಸಿದ ತಕ್ಷಣ ಪುನಃ ಈ ಭೂಲೋಕಕ್ಕೆ ಮರಳಿ ಬರಬೇಕಾಗಿದ್ದೇ. ಆದರೆ, ಧ್ಯಾನದಿಂದ ಸಂಪಾದಿಸುವ ಆತ್ಮಜ್ಞಾನದಿಂದ ಪುನಃ ಜನ್ಮ ಎಂಬುವುದು ಇಲ್ಲದೇ ಇರುವಂತೆ ಮಾಡಿಕೊಳ್ಳಬಹುದು.