“ಅವರವರ ವಾಸ್ತವ ಅವರವರದೆ

 

“ಒಂದು ಕಾಲದಲ್ಲಿ ಗುರುಕುಲದಲ್ಲಿ ಶ್ರೀಕೃಷ್ಣನು, ಕುಚೇಲನು ಒಳ್ಳೆಯ ಸ್ನೇಹಿತರಾಗಿದ್ದರು. ಶ್ರೀಕೃಷ್ಣನು ರಾಜಕುಮಾರನು, ಸಕಲ ಭೋಗ ಭಾಗ್ಯಗಳಿಂದ ಇರುವವನು. ಕುಚೇಲನು ಒಬ್ಬ ಬಡ ಬ್ರಾಹ್ಮಣನು. ಅದರ ಜೊತೆ ದೊಡ್ಡ ಸಂಸಾರ. ಕಡು ದರಿದ್ರತೆಯಲ್ಲಿ ಹೊಡೆದಾಡುತ್ತಿರುವವನು.

ಕುಚೇಲನ ಹೆಂಡತಿಗೆ ಒಂದು ದಿನ ಒಳ್ಳೆಯ ಉಪಾಯ ಹೊಳೆಯಿತು. ಆಕೆ ತನ್ನ ಗಂಡನಿಗೆ, ಶ್ರೀಕೃಷ್ಣನಿಗೆ ಇರುವ ಸ್ನೇಹವನ್ನು ಕುರಿತು ಕೇಳಿದ್ದಳು. ತನ್ನ ಯೋಚನೆಯನ್ನು ಪತಿಗೆ ಹೇಳಿದಳು. ಸ್ನೇಹಿತನ ಸಹಾಯ ಕೇಳಿ ಬನ್ನಿ ಎಂದು ಬಲವಂತ ಪಡಿಸಿದಳು. ಸಂದೇಹಿಸುತ್ತಲೇ ಅನಿವಾರ್ಯ ಪರಿಸ್ಥಿತಿಯಲ್ಲಿ ಸ್ನೇಹಿತನನ್ನು ಭೇಟಿಯಾಗಲು ಕುಚೇಲನು ಹೊರಟನು.

ಕುಚೇಲನ ಆಗಮನವನ್ನು ತಿಳಿದುಕೊಂಡ ಕೃಷ್ಣನು ಸಕಲ ರಾಜ ಮರ್ಯಾದೆಗಳಿಂದ ಆಹ್ವಾನಿಸಿದನು. ಆತ್ಮೀಯದಿಂದ ಮಾತನಾಡಿಸಿದನು. ವಿಶೇಷ ಔತಣ, ಸಂಗೀತ ನಾಟ್ಯಗಳಿಂದ ಸ್ನೇಹಿತನನ್ನು ಸಂತೋಷಪಡಿಸಿದನು. ತನ್ನ ಜೊತೆ ಸರಿ ಸಮಾನವಾಗಿ ನೋಡಿಕೊಂಡನು. ತನ್ನ ಜೊತೆ ತಂದ ಅವಲಕ್ಕಿಯನ್ನು ಸಹ ನಟನೆಯಿಲ್ಲದೆ ಸ್ವೀಕರಿಸಿದನು.

ಬಾಲ್ಯದ ಜೀವನವನ್ನು ಕುರಿತು ನೆನೆಸಿಕೊಳ್ಳುತ್ತಾ, ಆನಂದ ಸಂತೋಷದಿಂದ ಸಮಯ ಹೇಗೆ ಕಳೆಯಿತೊ ತಿಳಿಯಲಿಲ್ಲ. ಎರಡು ದಿನಗಳು ಕಳೆದವು. ಹೋಗಿ ಬರುತ್ತೇನೆ ಸ್ನೇಹಿತನೆ, ಎನ್ನುತ್ತಾ ಮನೆಗೆ ಹೊರಟನು ಕುಚೇಲನು. ಒಳ್ಳೆಯದು ಮಿತ್ರನೇ, ಹೋಗಿ ಬಾ … ಎನ್ನುತ್ತಾ ಮರ್ಯಾದೆಯಿಂದ ಕಳುಹಿಸಿಕೊಟ್ಟನು ಆ ಯೋಗೀಶ್ವರನು ಅಷ್ಟೇ.

ಏನಿದೆ … ಮನೆಗೆ ತಲುಪಿದ ತಕ್ಷಣ ಹೆಂಡತಿ ಕೂಗಾಡಿದಳು. ಅಷ್ಟು ದೂರ ಹೋಗಿ ಏನೂ ಕೇಳಲಿಲ್ಲವೇ? ನೀವು ಕೇಳಲಿಲ್ಲ ಸರಿ … ಆತ ಪ್ರಿಯ ಮಿತ್ರನಲ್ಲವೇ, ಕೃಷ್ಣನಾದರೂ ಏನೂ ಕೊಡದೇ ಕಳುಹಿಸಿದ್ದಾನೆ ಎಂದು ಬೈದಳು.

ಆ… ಎನ್ನುತ್ತಾ ಆಶ್ಚರ್ಯದಿಂದ ಬಾಯಿ ತೆಗೆದಿದ್ದೀರಾ? ಅದೇನದು ಕುಚೇಲನು ಮನೆಗೆ ತಲುಪಿದ ತಕ್ಷಣ ಅಷ್ಟೈಶ್ವರ್ಯಗಳು ಬಂದಿವೆ ಎಂದು ಕೇಳಿದ್ದೇವಲ್ಲವೆ ಎಂದು ಅಂದುಕೊಳ್ಳುತ್ತಿದ್ದೀರ.

“ಹಾಗೇನು ಆಗಲಿಲ್ಲ. ಅವೆಲ್ಲಾ ಕಲ್ಪಿತ! ಪ್ರತಿಯೊಂದು ಪುರಾಣದಲ್ಲೂ ನಿಜಸ್ವಲ್ಪ, ಕಲ್ಪಿತ ಜಾಸ್ತಿ ಇರುತ್ತದೆ.”

“ಅಷ್ಟೇ ಏಕೆ? ಪ್ರಹ್ಲಾದನು ಸಹ ಹಿರಣ್ಯಕಶ್ಯಪನ ದುರಹಂಭಾವವನ್ನು, ಪರಿಮಿತ ಜ್ಞಾನವನ್ನೂ ತನ್ನ ಸಂಪ್ರಜ್ಞತೆಯಿಂದ ಜಯಿಸಿದನೇ ವಿನಹ ಯಾವ ನರಸಿಂಹನು ಯಾವ ಕಂಭದಿಂದಲೂ ಬರಲಿಲ್ಲ.

ಕುಚೇಲನು ಜೀವನ ಪರ್ಯಂತ ಆ ದರಿದ್ರದಲ್ಲೇ ಇದ್ದನು. ಆತನ ಹೆಂಡತಿ ಚಿತ್ರಹಿಂಸೆ ಮಾಡುತ್ತಲೇ ಇದ್ದಳು. ಕುಚೇಲನ ಹೆಂಡತಿ ಸಹ ಸಾಕ್ರೆಟೀಸ್ ಹೆಂಡತಿಯ ಹಾಗೆ ಗಂಡುಬೀರಿ. ಅದೇನೊ ಚರಿತ್ರೆಯಲ್ಲಿ ದೊಡ್ಡ ಜ್ಞಾನಿಗಳ ಹೆಂಡತಿಯರು ಅಧಿಕವಾಗಿ ಹಾಗೇ ಇರುತ್ತಾರೆ…”

” ಆದರೆ ಕೃಷ್ಣನು ಏನು ಕೊಡಲಿಲ್ಲವೇ… ?””

ಬಡತನ ಕುಚೇಲನ ವಾಸ್ತವ. ಆತನ ಕರ್ಮಫಲ. ಶ್ರೀಕೃಷ್ಣನು ಮಹಾಜ್ಞಾನಿ, ಇತರರ ವಾಸ್ತವಗಳನ್ನು ಬದಲಾಯಿಸುವ ಮೂರ್ಖದ ಕೆಲಸ ಆತ ಏಕೆ ಮಾಡುತ್ತಾರೆ ? ಆ ವಿಷಯ ಕುಚೇಲನಿಗೂ ತಿಳಿದಿದೆ. ಆದ್ದರಿಂದಲೇ, ತಾನು ಸಹ ಸ್ನೇಹಿತನನ್ನು ಏನೂ ಕೇಳಲಿಲ್ಲ.

ಹೆಂಡತಿಯ ಜಗಳ ತಡೆಯಲಾರದೇ ಹೋದನಷ್ಟೆ. ಸ್ನೇಹಿತರಿರುವುದು ಬಾಧ್ಯತೆಗಳನ್ನು ಹಂಚಿಕೊಳ್ಳುವುದಕ್ಕಲ್ಲ. ಅವರವರ ಬಾಧ್ಯತೆಗಳು ಅವರವರದೇ.

ಮಿತ್ರನಾಗಿ ಭೇಟಿಯಾಗಲು ಹೋದಾಗ, ಅತಿಥಿಯಾಗಿ ಇರುವಷ್ಟು ಕಾಲ ಕೃಷ್ಣನ ಸಕಲ ಭೋಗಿ ಭಾಗ್ಯಗಳು ತನಗೆ ಕೂಡಾ ಸೇರುತ್ತದೆ … ಅಷ್ಟರವರಗೆ. ಅನಂತರ, ಅವರ ವಾಸ್ತವ ಅವರದೆ! ಅವರವರ ಪ್ರಾರಬ್ಧ ಅವರವರದೇ. ಅವರ ಅನುಭವ ಅವರದೇ. ಅರ್ಥವಾಯಿತಾ.

ಧರ್ಮ ತುಂಬಾ ಸೂಕ್ಷ ..

ಸುನಿಶ್ಚಿತ ಬುದ್ಧಿಯ ಧರ್ಮವನ್ನು ತಿಳಿದುಕೊಳ್ಳುವ ಮಾರ್ಗ …

ಕಠೋರವಾದದ್ದು ಪರಮ ಸತ್ಯ ..

ಆ ಸತ್ಯವನ್ನು ಗ್ರಹಿಸುವುದೇ ಜೀವನದ ಪರಮಾರ್ಥ …