” ಅವರವರ ಅನುಭವಗಳು ಅವರವರದು .. ಅವರವರ ಜ್ಞಾನ ಅವರವರದು “

’ಧ್ಯಾನ’ ಎನ್ನುವ ಪದ .. ಅದರ ಶುಭ ಪರಿಣಾಮಗಳ ಕುರಿತು ಚರ್ಚಿಸುವಂಥದ್ದಲ್ಲ, .. ಅವುಗಳು ಅನುಭವಿಸುವಂಥವು. ಚರ್ಚೆಗಳಲ್ಲಿ ಯಾರಿಗೆ ಹೆಚ್ಚು ವಾಕ್ಚಾತುರ್ಯ ಇದೆಯೋ ಅವರು ಗೆಲ್ಲುತ್ತಾರೆ ಹೊರತು ಸತ್ಯ ಬಟ್ಟಬಯಲಾಗುವುದಿಲ್ಲ.

* * *

“ಚದುರಂಗ ಆಡುವವನ ಆನಂದ .. ಚದುರಂಗ ಎಂದರೇನು ಎಂಬುದೇ ತಿಳಿಯದವರಿಗೆ ಅರ್ಥವಾಗುವುದಿಲ್ಲ. ಹಿಂದಿ, ಕನ್ನಡ ಭಾಷೆಗಳನ್ನು ಅರಿತವರಿಗೆ, ಆಯಾಯ ಭಾಷೆಗಳಲ್ಲಿ ಪ್ರಾವೀಣ್ಯತೆ ಇರುವವರಿಗೆ ಆ ಭಾಷೆಗಳ ಅಂದಚಂದ ತಿಳಿದುಬರುತ್ತದೆ .. ಆ ಭಾಷೆಗಳು ಅರಿಯದವರು ‘ ತುಟಿಗಳು ಅಲುಗಾಡುತ್ತಿವೆ; ಯಾವುದೋ ಬಗೆಬಗೆಯ ಧ್ವನಿಗಳು ಕೇಳಿಬರುತ್ತಿವೆ ’ ಎಂದುಕೊಳ್ಳುತ್ತಾರೆ. ಅದಕ್ಕೆ ಕಾರಣ ಅನುಭವ ಆಗದಿರುವುದೇ.”

* * *

“ಬುದ್ಧತ್ವ ಹೊಂದುವ ಕ್ರಮದಲ್ಲಿ ಸಿದ್ಧಾರ್ಥನು ಅನೇಕ ಜನ ಗುರುಗಳನ್ನು ಭೇಟಿಯಾದನು. ಶುಶ್ರೂಷೆ ಮಾಡಿದನು, ಎಲ್ಲರ ಸಂದೇಶಗಳನ್ನು ಪಡೆದನು, ಮನನ ಮಾಡಿಕೊಂಡನು, ಆದರೂ ಅನ್ವೇಷಿಸುತ್ತಲೇ ಇದ್ದಾನೆ. ಅದಕ್ಕೂ ಹಿಂದೆ ಐದೂವರೆ ವರ್ಷಗಳು ಬಹಳ ಸಂಶೋಧನೆ ನಡೆಸಿದನು. ಆದರೆ, ಮೂರು ಜಾವಗಳಲ್ಲೇ ಆತನು ‘ಸರಿಯಾದ ಸಾಧನೆ’ ಎನ್ನುವುದನ್ನು ಪ್ರಾರಂಭಿಸಿ ಕೇವಲ ಒಂದು ದಿನದಲ್ಲೇ ಎಲ್ಲವನ್ನೂ ಸಾಧಿಸಿದನು.”

“ಬುದ್ಧನಾದರೂ…, ನಾವಾದರೂ… ಮತ್ತೆ ಯಾರಾದರೂ ಸರಿಯೆ… ಎಲ್ಲರ ಮಾತು ಕೇಳಿಸಿಕೊಳ್ಳಬೇಕು. ಪ್ರತಿಯೊಬ್ಬರಿಂದ ಚಿಕ್ಕದಾಗಲಿ, ದೊಡ್ಡದಾಗಲಿ ಕಲಿತುಕೊಳ್ಳುವುದು ಎಂಬುವುದು ಇದ್ದೇ ಇರುತ್ತದೆ. ಹೀಗೆ ನಿರಂತರ ಕಲಿತುಕೊಳ್ಳುತ್ತಲೇ ಇದ್ದರೆ ಯಾವುದೋ ಒಂದು ದಿನ ನಮ್ಮ ‘ಅಂತರ್ವಾಣಿ’ ನಮಗೆ ಕೇಳಿಸುತ್ತದೆ.”

* * *

“ಜ್ಞಾನ ಎನ್ನುವುದು ಅನಂತವಾದದ್ದು. ಹನುಮಂತನ ಬಾಲದಂತೆ ಅದು ಇರುತ್ತದೆ. ಆದರೆ, ಅದಕ್ಕೆ ಅಂತ್ಯವಿಲ್ಲ. ನಮ್ಮ ಧ್ಯಾನ ಆಂದೋಲನಕ್ಕೆ ಬುದ್ಧನು ಆರಾಧ್ಯ ದೈವ. ಆದರೆ, ಆತನನ್ನು ಪೂಜಿಸುವುದು, ಪುಷ್ಪಾಲಂಕಾರ ಮಾಡುವುದು, ಮಂತ್ರತಂತ್ರಾದಿ ವಿದ್ಯೆಗಳನ್ನು ಆಚರಿಸುವುದು; ಇವುಗಳಿಗೆ ನಮ್ಮ ಸಂಪೂರ್ಣ ವಿರೋಧವಿದೆ. ನಾವು ಮಾಡಬೇಕಾದ್ದು ಒಂದೇ .. ಅವರನ್ನು ಆದರ್ಶ ಪುರುಷನಾಗಿ ಹೃದಯದಲ್ಲಿ ಪ್ರತಿಷ್ಠಾಪನೆ ಮಾಡಿಕೊಳ್ಳುವುದು .. ಅವರ ಸಿದ್ಧಾಂತಗಳನ್ನು ಪಾಲಿಸುವುದು. ಇದು ಒಂದೇ ಪ್ರತಿಯೊಬ್ಬ ಮಾನವನೂ ಅವರಿಗೆ ನೀಡಬೇಕಾದ ಅಪರೂಪವಾದ ಕಾಣಿಕೆ.”

“ಬುದ್ಧನಂಥ ಮಾಸ್ಟರ್ ಭೂಮಿಯ ಮೇಲೆ ಅವತರಿಸಿ ಹೇಳಬೇಕಾದ ಅಸಲೀ ಸತ್ಯಗಳು ಹೇಳಿದ ಮೇಲೆ .. ಮತ್ತೊಬ್ಬ ಗುರುವು ಎಲ್ಲಿಂದ ಬರುತ್ತಾರೆ? ಬಂದರೂ ಅವರನ್ನು ಮೀರಿ ಏನು ಹೇಳುತ್ತಾನೆ? ಇನ್ನೂ ಏನಾದರೂ ಇದ್ದರೆ ತಾನೇ ಹೇಳುವುದಕ್ಕೆ! ಬುದ್ಧನು ಕೂಡಾ ತಾನು ಬುದ್ಧತ್ವವನ್ನು ಹೊಂದಿದ ನಂತರ ‘ಇನ್ನೂ ನಾನು ತಿಳಿದುಕೊಳ್ಳಬೇಕಾದ್ದು .. ಇತರರಿಗೆ ತಿಳಿಯಪಡಿಸಬೇಕಾದ ಸೃಷ್ಟಿರಹಸ್ಯಗಳು ಏನಾದರೂ ಇದ್ದರೆ ಅವು ನನಗೆ ಹೇಳುವ ಮಹಾತ್ಮನು ಕಾಣಿಸಬೇಕು’ ಎಂದುಕೊಂಡು ಧ್ಯಾನ ಮಗ್ನನಾದರೆ .. ತನಗೆ ತಾನೇ ಕಾಣಿಸಿದನಂತೆ! ‘ಕಟ್ಟಕಡೆಯ ನಿತ್ಯಸತ್ಯವಾದ ಗುರುವು ಬುದ್ಧನೇ’ ಎನ್ನುವುದಕ್ಕೆ ಇದಕ್ಕಿಂತಾ ನಿದರ್ಶನ ಬೇಕೇ?”

* * *

“ತುಂಬಾ ಧ್ಯಾನ ಮಾಡಿ ನಮ್ಮ ದಿವ್ಯಚಕ್ಷುವನ್ನು ಉತ್ತೇಜಿಸಿಗೊಳಿಸಬೇಕು. ಗತಜನ್ಮಗಳನ್ನು ನೋಡಿಕೊಳ್ಳಬೇಕು. ಅವುಗಳನ್ನು ನೋಡಿಕೊಂಡರೇನೆ ನಮಗೆ ಅನೇಕ ಜನ್ಮಪರಂಪರೆಯಲ್ಲಿ ಒಂದು ಜನ್ಮವಾದ ಈ ವರ್ತಮಾನ ಜನ್ಮಕೂಡಾ ಅರ್ಥವಾಗುತ್ತದೆ .. ‘ನಮ್ಮ ಆತ್ಮ ಪ್ರಯಾಣ ಇಂದಿನ ತಂದೆ ತಾಯಿಯರಿಂದ ಪ್ರಾರಂಭವಾಗಲಿಲ್ಲ’ ಎನ್ನುವ ವಿಷಯ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.”

“ಸಿದ್ಧಾರ್ಥನು ಬುದ್ಧನಾಗಿ ಪರಿಣಿತಿ ಹೊಂದಿದ ಮೇಲೆ ಕೂಡಾ ಅವರ ತಂದೆ ‘ನಿಮ್ಮ ಮುತ್ತಾತ, ತಾತ, ನಾನು ಎಲ್ಲರೂ ಮಹಾರಾಜರು. ಆ ಪರಂಪರೆಯನ್ನು ಈಗಲಾದರೂ ಮುಂದುವರೆಸಲು ರಾಜ್ಯಾಧಿಕಾರವನ್ನು ಸ್ವೀಕರಿಸು’ ಎಂದನು. ಆಗ ಬುದ್ಧನು ನಕ್ಕು, ‘ತಂದೆ! ನಿನ್ನ ಅನುಭವಗಳು ಬೇರೆ, ನನ್ನ ಅನುಭವಗಳು ಬೇರೆ. ನೀನು ನಿನ್ನ ಪ್ರಾಪಂಚಿಕ ಬಂಧಗಳು, ಅಂತಸ್ತುಗಳಿಂದ ಮಾತನಾಡುತ್ತಿರುವೆ. ನನ್ನ ವಿಷಯಕ್ಕೆ ಬಂದರೆ ನಾನು ಜನ್ಮಜನ್ಮಗಳಿಂದ ಈ ಬುದ್ಧತ್ವವನ್ನು ಕುರಿತು ತಪಿಸಿದನೇ ಹೊರತು ರಾಜಭೋಗಗಳನ್ನು ಕುರಿತು ಅಲ್ಲ. ಅನೇಕ ಜನ್ಮಗಳು ಅರಿಹಂತ್ ಆಗಿ, ಬೋಧಿಸತ್ವನಾಗಿ ಜನ್ಮಿಸಿ ಕೊನೆಗೆ ಬುದ್ಧನಾದೆನು. ಎಲ್ಲರನ್ನೂ ಬುದ್ಧತ್ವದಕಡೆ ನಡೆಸುವುದೇ ನನ್ನ ಏಕೈಕ ಗುರಿ’ ಎಂದು ಹೇಳಿದನು.”

“ಶರೀರಕ್ಕೆ ಸೀಮಿತನು ಶುದ್ಧೋಧನನು; ಶರೀರಕ್ಕೆ ಅತೀತವಾದ ಆತ್ಮಸ್ಥಿತಿ ಹೊಂದಿದವನು ಬುದ್ಧನು.”

* * *

“ಬುದ್ಧನಲ್ಲಿ ನೋಡಬೇಕಾದ ನಿಜವಾದ ಬುದ್ಧತ್ವವನ್ನು ಈ ಜಗತ್ತು ಮರೆತುಹೋಗಿದೆ. ನಿರಂತರ ಧ್ಯಾನ ಪ್ರಚಾರದ ಮೂಲಕ ಈಗ ಆ ಬುದ್ಧತ್ವವನ್ನು ನಾವು ಎಲ್ಲರಿಗೂ ಪುನಃ ನೆನಪು ಮಾಡುತ್ತಿದ್ದೇವೆ.”