“ಅರ್ಜುನನಹಾಗೆ ಉಳಿಯಬೇಡ

ಕೃಷ್ಣನ ಹಾಗೆ ಬೆಳೆಯಬೇಕು”

 

” ಧ್ಯಾನವೇ ದೈವ”

“ಧ್ಯಾನವೇ ವೇದ”

“ಧ್ಯಾನವೇ ವೈದ್ಯ”

“ಜ್ಞಾನವನ್ನು ಬೆಳೆಸಿಕೊಳ್ಳಬೇಕು”

ಅರ್ಜುನನು ಬುದ್ಧಿಯನ್ನು ಮಾತ್ರ ಹೊಂದಿದ್ದಾನೆ; ಆದರೆ ಶ್ರೀಕೃಷ್ಣನು ಆತ್ಮಜ್ಞಾನವನ್ನು ಕೂಡ ಬೆಳೆಸಿಕೊಂಡು ಪರಮಾತ್ಮನಾದನು. ಕೃಷ್ಣನು ಅರ್ಜುನನ್ನು ಉದ್ದೇಶಿಸಿ ’ತಸ್ಮಾತ್ ಯೋಗೀಭವ ಅರ್ಜುನ’ ಎಂದನು. ನಾವೆಲ್ಲಾ ಸಹ ಅರ್ಜುನನ ಹಾಗೆ ಕೇವಲ ’ ಬುದ್ಧಿ ’ ಮಾತ್ರವೇ ಹೊಂದಿದರೆ ಸರಿಹೋಗುವುದಿಲ್ಲ. ಕೃಷ್ಣನ ಹಾಗೆ ’ ಜ್ಞಾನ ’ವನ್ನು ಕೂಡಾ ಬೆಳೆಸಿಕೊಳ್ಳಬೇಕು. ’ ಜ್ಞಾನ ’ ಎಂದರೆ ’ಆತ್ಮಜ್ಞಾನ’, ಅದು ಧ್ಯಾನದಿಂದ ಮಾತ್ರ ಸಂಭವ.

ಧ್ಯಾನ ಎಂಬುವುದು ಒಬ್ಬರು ಕೊಟ್ಟರೆ ಮತ್ತೊಬ್ಬರು ಸ್ವೀಕರಿಸುವ ವಸ್ತುವಲ್ಲ. ಉದಾಹರಣೆಗೆ… ಸಂಗೀತ… ಅದು ತೆಗೆದುಕೊಂಡರೆ ಬರುವುದಲ್ಲ; ಸಾಧನೆಯಿಂದ ಮಾತ್ರ ಸಾಧ್ಯವಾಗುತ್ತದೆ.

“ಲಂಖಣ ಪರಮ ಔಷಧ”

ಲಂಖಣ ಪರಮ ಔಷಧ. ಹೊಟ್ಟೆ ಖಾಲಿಯಾಗಿದ್ದರೆ ಅದು ಪರಮ ಔಷಧ. ವಾಕ್ಕು ಖಾಲಿಯಾಗಿದ್ದರೆ ಅದು ಪರಮ ಪರಮ ಔಷಧ. ಮತ್ತು ಮನಸ್ಸು ಖಾಲಿಯಾಗಿಟ್ಟುಕೊಂಡರೆ … ಪರಮ ಪರಮ ಪರಮ ಔಷಧ. ಅನಾವಶ್ಯಕ ಯೋಚನೆಗಳು ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಆಲೋಚನಾರಹಿತ ಸ್ಥಿತಿಯ ಅಭ್ಯಾಸದಿಂದಲೇ ತದನಂತರ ಮಾಡುವ ಆಲೋಚನೆಗಳು ಸಕ್ರಮವಾಗುತ್ತವೆ. ಆಲೋಚನಾರಹಿತ ಸ್ಥಿತಿ ಧ್ಯಾನದಿಂದ ಮಾತ್ರ ಸಾಧ್ಯ.